ನೀ ಬಂಗಾರ ಬಣ್ಣದಾಕಿ ಒಳ್ಳೆಯ ಗುಣದಾಕಿ, ಹಾಸ್ಯ ಭರಿತ ನಾಟಕ ಪ್ರದರ್ಶನ

natak
Published on

ಬೆಳಗಾವಿ: ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ, ಕಮತಗಿ. ಇವರಿಂದ ಇದೇ ದಿ. 25 ಶುಕ್ರವಾರದಿಂದ ಪ್ರಾರಂಭಗೊಳ್ಳುತ್ತಿರುವ ಶ್ರೀ ಬಿ ಆರ್ ನಾಯ್ಕ ಸಿರ್ಸಿ ವಿರಚಿತ ನೀ ಬಂಗಾರ ಬಣ್ಣದಾಕಿ ಒಳ್ಳೆಯ ಗುಣದಾಕಿ ಅರ್ಥಾತ್ ಧರ್ಮಾಪುರದ ದೊರೆಸಾನಿ ಎಂಬ ಸುಂದರ ಹಾಸ್ಯ ಭರಿತ ಸಾಮಾಜಿಕ ನಾಟಕ ಪ್ರಾರಂಭಗೊಳ್ಳಲಿದೆ.
ಸಂಘದ ಮಾಲೀಕರಾದ ಪಾಪು ಮಾತನಾಡಿ ಈ ಹಿಂದೆ ಪ್ರದರ್ಶನಗೊಂಡ ಪೋಸ್ ಕೊಟ್ಟಾಳೋ ಫೋನ ನಂಬರ್ ಕೊಟ್ಟಾಳೋ ನಾಟಕ ಯಶಸ್ವಿ 175 ಪ್ರಯೋಗ ಕಂಡು ಧಾಖಲೆ ನಿರ್ಮಿಸಿತು. ಈ ನಾಟಕಕ್ಕೆ ಪ್ರೋತ್ಸಾಹ ನೀಡಿದ ಬೆಳಗಾವಿ ಹಾಗೂ ಸುತ್ತಮುತ್ತಲಿನ ಅಭಿಮಾನಿಗಳು ಹಣ ಕೊಟ್ಟು ನಾಟಕಗಳನ್ನು ನೋಡುವುದರ ಮೂಲಕ ಪ್ರೋತ್ಸಾಹಿಸುತ್ತ ಬಂದಿದ್ದಾರೆ ಅವರಿಗೆ ನಾನು ಯಾವಾಗಲೂ ಋಣಿಯಾಗಿದ್ದೇನೆ ಎಂದು ಹೇಳಿದರು.
ಸಂಘದ ಪ್ರಮುಖ ಕಲಾವಿದ ಶರತ ಕುಂಬ್ಳೆ ಮಾತನಾಡಿ ನಾಳೆಯಿಂದ ಪ್ರದರ್ಶನಗೊಳ್ಳುತ್ತಿರುವ ನಾಟಕ ವೃತ್ತಿ ರಂಗಭೂಮಿ ಇತಿಹಾಸದಲ್ಲಿ ವಿಭಿನ್ನ ಶೈಲಿಯ ನಾಟಕ. ಈ ನಾಟಕದ ಕೊನೆಯ ಸನ್ನಿವೇಶಕ್ಕೆ ಸುಮಾರು 5ಲಕ್ಷ ಖರ್ಚು ಮಾಡಲಾಗಿದೆ ಪ್ರತಿಯೊಂದು ಸನ್ನಿವೇಶಕ್ಕೂ ವಿಶೇಷ ವಿಭಿನ್ನ ಸೆಟ್ ಹಾಕಲಾಗಿದೆ ಎಂದು ಹೇಳಿದರು. ಸಂಘದ ಖಳನಾಯಕ ಪಾತ್ರಧಾರಿ ಸಂಕೇತ್ ಮಂಗಳೂರು, ಪೋಸ್ ಕೊಟ್ಟಾಳೋ ಫೋನ ನಂಬರ್ ಕೊಟ್ಟಾಳೋ ನಾಟಕದಲ್ಲಿ ಯಾವ ರೀತಿ ಊರುಗಪ್ಪನ ಪಾತ್ರಕ್ಕೆ ಪ್ರೋತ್ಸಾಹ ನೀಡಿದ್ದೀರಿ. ಅದೇ ರೀತಿ ಮುಂಬರುವ ನನ್ನೆಲ್ಲ ಪಾತ್ರಗಳಿಗೂ ಪ್ರೋತ್ಸಾಹ ನೀಡಬೇಕೆಂದರು. ಇನ್ನು ಹಾಸ್ಯ ಕಲಾವಿದರಾದ ರಿಯಾಜ ಕರ್ಜಗಿ ಹಾಗೂ ಆನಂದ ಪತ್ತಾರ ಮಾತನಾಡಿ ನಮ್ಮ್ ಸಂಸ್ಥೆಯ ಎಲ್ಲ ನಾಟಕಗಳು ಕುಟುಂಬ ಸಮೇತ ನೋಡುವಂತಹ ನಾಟಕಗಳು ಯಾವದೇ ಅಶ್ಲೀಲ ಸಂಭಾಷಣೆ ಇರುವುದಿಲ್ಲ ಹಾಸ್ಯದಲ್ಲೇ ಸಮಾಜಕ್ಕೆ ಸಂದೇಶ ನೀಡುವಂತಹ ನಾಟಕಗಳು ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಹಿರಿಯ ಕಲಾವಿದರಾದ ಬಾಬಣ್ಣ ಬನ್ನೂರ್ ನಾಟಕ ಬರಹಗಾರಾದ ಬಿ ಆರ್ ನಾಯ್ಕ ಸಿರ್ಸಿ ಹಾಗೂ ಮಹಾಬಲೆಶ್ವರ ನಾಯ್ಕ ಮೇಘರಾಜ್ ಜಾಲಿಹಾಳ ಕನಕಲಕ್ಷ್ಮಿ ಸಿರ್ಸಿ ಮೇಘನಾ ದಾವಣಗೆರೆ ರಾಘು ಶಿಂದೆ ಹಾಗೂ ಸಂಘದ ಹಿತೈಷಿಗಳಾದ ಬಿ ಎ ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net