ನಿಸ್ವಾರ್ಥ ಸೇವೆಯಿಂದ ಮಾತ್ರ ನೆಮ್ಮದಿ

02.07 hulsoor photo (01)
Published on

ಹುಲಸೂರು: ದೇಶದ ಎಲ್ಲ ಇಲಾಖೆ ಅಧಿಕಾರಿಗಳಿಗೆ ರಜೆ ಇದ್ದರೂ ವೈದ್ಯರಿಗೆ ರಜೆ ಇಲ್ಲ. ಇವರ ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ನಿಸ್ವಾರ್ಥ ಸೇವೆ ಮಾಡುವುದು ಅಗತ್ಯವಾಗಿದೆ ಎಂದು ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗೇಶ ಮೇತ್ರೆ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ವೈದ್ಯರ ದಿನ ನಿಮಿತ್ತ ವೈದ್ಯಾಧಿಕಾರಿ ಮತ್ತು ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಜೀವದ ಹಂಗು ತೊರೆದು ಕರೊನಾ ಪಾಸಿಟಿವ್ ರೋಗಿಗಳಿಗೆ ಉತ್ತಮ ಚಿಕ್ಸಿತೆ ನೀಡಿ ಗುಣಮುಖರನ್ನಾಗಿ ಮಾಡುತಿರುವುದು ಸಂತಸ ತಂದಿದೆ ಎಂದರು.
ವೈಧ್ಯಾಧಿಕಾರಿ ಡಾ.ಆರಿಫೋದ್ಧಿನ್ ಮಾತನಾಡಿ, ಸಾಕಷ್ಟು ಜನರು ತಮ್ಮ ಕೆಲಸ ಇದ್ದರೆ ಮಾತ್ರ ಕಾಳಜಿ ಮಾಡುತ್ತಾರೆ. ಆದರೆ ರಾಜ್ಯ ಎಬಿವಿಪಿ ಸಂಘಟನೆ ಅವರು ವೈದ್ಯರ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಡಾ.ಶಶಿಕಾಂತ ಕನ್ನಾಡೆ, ಡಾ.ಮನೋಹರ ಹಲ್ಲಶೆಟ್ಟೆ, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಸಂಗಮೇಶ ಭೊಪಳೆ, ಪ್ರಮುಖರಾದ ಸಿದ್ರಾಮ ಪಾರಶೆಟ್ಟೆ, ಸಚಿನ ವಗ್ಗೆ, ಕಲ್ಯಾಣಿ ದಾನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net