ನಿಸರ್ಗಧಾಮದ ತೂಗುಸೇತುವೆ ಉದ್ಘಾಟನೆ

01Kush08
Published on

ಕೊಡಗು : ಕುಶಾಲನಗರ ಕಾವೇರಿ ನಿಸರ್ಗಧಾಮದ ತೂಗು ಸೇತುವೆಯನ್ನು ಭಾನುವಾರ ಎಪಿಸಿಸಿಎಫ್ ಕುಮಾರ್ ಪುಷ್ಕರ್ ಟೇಪ್ ಕತ್ತರಿಸುವ ಮೂಲಕ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.


ನಿರ್ವಹಣೆ ಹಿನ್ನೆಲೆಯಲ್ಲಿ ಕಳೆದ 5 ತಿಂಗಳಿಂದ ಸ್ಥಗಿತಗೊಳಿಸಿದ್ದ ತೂಗುಸೇತುವೆಯನ್ನು ಇದೀಗ ದುರಸ್ತಿಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತ ಮಾಡಲಾಗಿದೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು.


ಗುಜರಾತ್‌ನ ಮೋರ್ಬಿ ದುರಂತದ ಬಳಿಕ ತೂಗುಸೇತುವೆಗಳ ಸಾಮರ್ಥ್ಯದ ಬಗ್ಗೆ ಸಾಕಷ್ಟು ಚರ್ಚೆ ಏರ್ಪಟ್ಟ ನಂತರ ಕಾವೇರಿ ನಿಸರ್ಗಧಾಮದ ತೂಗು ಸೇತುವೆ ರಿಪೇರಿಗೆ ಇಲಾಖೆಗೆ ಮುಂದಾಗಿತ್ತು. 27 ವರ್ಷ ಹಳೆಯದಾದ ಸೇತುವೆ ಅಲ್ಲಲ್ಲಿ ಶಿಥಿಲಗೊಂಡಿದ್ದ ಕಾರಣ 45 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿತ್ತು.


ಪ್ರವಾಸಿಗರಿಗಾಗಿ ಪರ್ಯಾಯ ಮಾರ್ಗವನ್ನು ಸೃಷ್ಟಿಸಿ ಹಳೆಯ ಸೇತುವೆ ಮೇಲೆ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. 5 ತಿಂಗಳ ತರುವಾಯ ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದೀಗ ಬಳಕೆಗೆ ಮುಕ್ತವಾಗಿದೆ. ಸಿಸಿಎಫ್ ಬಿಎನ್‌ಎನ್ ಮೂರ್ತಿ, ಡಿಎಫ್‌ಒ ಪೂವಯ್ಯ, ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶಿವರಾಂ, ಡಿಆರ್‌ಎಫ್‌ಒ ವಿಲಾಸ್ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net