

ಚನ್ನಮ್ಮನ ಕಿತ್ತೂರು: ಪರಿಸರ ನಾಶದಿಂದ ಜಾಗತಿಕ ತಾಪಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ ಎಂದು ಪರಿಸರ ತ ಪ್ರಕಾಶ್ ಭಟ್ ಹೇಳಿದರು. ಸಮೀಪದ ದೇವಗಾವಿಯ ಶ್ರೀ ತವನಪ್ಪ ಅವಲಕ್ಕಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 250 ಅಡಕೆ ಸಸಿ ನೆಡುವ ಹಾಗೂ ನೂತನ ಕಾಂಪೌಂಡ್ ನಿರ್ಮಾಣಕ್ಕೆ ಸಹಾಯ ಮಾಡಿದ ಮಹನೀಯರಿಗೆ ಗೌರವಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಪರಿಸರ ರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪರಿಸರ ಹಾಳು ಮಾಡುವುದರಿಂದ ಮನುಷ್ಯ ಮುಂದೊಂದು ದಿನ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಪರಿಸರ ರಸುವುದು ಅಗತ್ಯ ಎಂದರು.
ಶಂಕರ ಕುಂಬಿ ಮಾತನಾಡಿ, ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಡಾ.ಬಾಳಣ್ಣ ಶೀಗಿಹಳ್ಳಿ ಮಾತನಾಡಿದರು. ಬಾಬು ದೇವರಮನಿ, ಇಂಜಿನಿಯರ್ ಮಹಾಂತೇಶ ಗೆಜಪತಿ, ಕಾಂಪೌಂಡ್ ನಿರ್ಮಿಸಿದ ಹಸನಸಾಬ್ ಅಂಬಲತಡಿ, ರಾಜಶೇಖರ ಹಿರೇಮಠ ಅವರನ್ನು ಸತ್ಕರಿಸಲಾಯಿತು. ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂದ ಚೇರ್ಮನ್ ರಾಜೇಂದ್ರ ಅವಲಕ್ಕಿ, ವೈಸ್ ಚೇರ್ಮನ್ ಚಂದ್ರಗೌಡ ಪಾಟೀಲ ಹಾಗೂ ಸಂದ ನಿರ್ದೇಶಕರು ಇತರರಿದ್ದರು. ಮುಖ್ಯಾಧ್ಯಾಪಕ ಎಸ್.ಎಸ್.ಅಂಗಡಿ ಸ್ವಾಗತಿಸಿದರು. ಎಸ್.ಎಂ.ಹಳಂಗಳಿ ಪರಿಚಯಿಸಿದರು. ಎಲ್.ಆರ್.ನಾಯ್ಕ್ ನಿರೂಪಿಸಿದರು.
ಕೆ.ಎಸ್.ತಳವಾರ ವಂದಿಸಿದರು.