

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಧ್ಯಯನದ ಜತೆಗೆ ಒತ್ತಡ ನಿವಾರಿಸಿಕೊಳ್ಳಲು ಮತ್ತು ಸಾಕಷ್ಟು ವಿಶ್ರಾಂತಿ ನೀಡುವ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಹೃದ್ರೋಗ ತಜ್ಞ ಡಾ. ಅನಿಕೇತ ಬೆಳಗದ್ದೆ ಅಭಿಪ್ರಾಯಪಟ್ಟರು.
ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಲುಪುವ ನಿರ್ದಿಷ್ಟ ಗುರಿಗಿಂತ ತಲುಪುವ ದಾರಿ ಆನಂದದಾಯಕವಾಗಿರಲಿ. ಮಾಡುವ ಕೆಲಸವನ್ನು ಪ್ರೀತಿಯಿಂದ ಹಾಗೂ ನಿಷ್ಠೆಯಿಂದ ಮಾಡಬೇಕು. ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಸ್ವಯಂ ತೃಪ್ತಿ ತಾನಾಗಿಯೇ ಬರುತ್ತದೆ. ಜೀವನದುದ್ದಕ್ಕೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳವುದು ಬಹಳ ಮುಖ್ಯ. ನನ್ನ ಯಶಸ್ಸಿಗೆ ಕಾರಣವಾದ ಆತ್ಮ ವಿಶ್ವಾಸ, ಭರವಸೆ, ಕಠಿಣ ಪರಿಶ್ರಮದ ಸ್ವಭಾವವನ್ನು ಎಸ್‌ಡಿಎಂ ಕಾಲೇಜಿನಿಂದ ಕಲಿತಿದ್ದೇನೆ ಎಂದರು.
ಎಸ್‌ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ, ಡಾ. ಅಶ್ವಿನಿ ಬಿದ್ರಿ ಅನಿಕೇತ, ಎಸ್‌ಡಿಎಂ ವಿವಿ ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್, ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲ ಡಾ. ವಿಜಯ ಕುಲಕರ್ಣಿ, ಡಾ. ದೀಪಕ ಕಣಬೂರ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗ್ಡೆ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.
ನಂತರದಲ್ಲಿ ಫ್ಯಾಶನ್ ಶೋ ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ಅಲ್ಲಮ ಕರಿಬಸಪ್ಪ ಮತ್ತು ಸೌಮ್ಯ ನಿರೂಪಿಸಿದರು.