ನಿಷ್ಠಾವಂತರಿಂದ ಸಮಾಜಕ್ಕೆ ಬಲ

0706KLB02
Published on

ಕಲಬುರಗಿ: ಕೋಲಿ ಸಮಾಜದ ಸರ್ಕಾರಿ ನೌಕರರ ಕರ್ತವ್ಯ ನಿಷ್ಠೆಯಿಂದ ಸಮಾಜ ಬಲಿಷ್ಠವಾಗುತ್ತಿದೆ. ಸಂಘಟಿತ ಪ್ರಯತ್ನ ಇನ್ನಷ್ಟು ಆಗಲಿ. ಕೋಲಿ ಯುವಕರಲ್ಲಿ ಪ್ರಾಮಾಣಿಕ ಪ್ರಜ್ಞೆ ಜಾಗೃತವಾಗಲಿ. ಆಗ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ನೀಲಕಂಠ ಜಮಾದಾರ ಅಭಿನಂದನಾ ಸಮಿತಿ ಹಮ್ಮಿಕೊಂಡ ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನೀಲಕಂಠ ಜಮಾದಾರ ಕುರಿತ ನೀಲಕಂಠ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು. ನೀಲಕಂಠ ಜಮಾದಾರ ಸರ್ಕಾರಿ ಸೇವೆಯಲ್ಲಿದ್ದರೂ, ಸೈನಿಕನಂತೆ ವೃತ್ತಿ ಮತ್ತು ಪ್ರವೃತ್ತಿ ನಿರ್ವಹಿಸಿ ಮಾದರಿಯಾಗಿದ್ದಾರೆ.
ಶಾಸಕ ಎಂ.ವೈ.ಪಾಟೀಲ, ನೀಲಕಂಠ ಜಮಾದಾರ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.
ಕರ್ನಾಟಕ ಇಂಜಿನಿಯರಿAಗ್ ಸೇವಾ ಸಂಘದ ರಾಜ್ಯಾಧ್ಯಕ್ಷ ಪೀತಾಂಬರ ಸ್ವಾಮಿ ಮಾತನಾಡಿ, ಇಂಜಿನಿಯರ್‌ಗಳನ್ನು ಎಲ್ಲರೂ ಹಳದಿ ಕಣ್ಣಿನಿಂದ ನೋಡುತ್ತಾರೆ. ಇಂತಹ ದಿನದಲ್ಲಿ ಇಷ್ಟು ದೊಡ್ಡ ಅಭಿಮಾನಿ ಬಳಗ ಕಟ್ಟಿಕೊಂಡ ನೀಲಕಂಠ ಮಾದರಿ ಎಂದರು.
ಕೃತಿ ಕುರಿತು ನಟ ಗಂಗಾಧರ ಬಡಿಗೇರ ಮಾತನಾಡಿದರು. ಗುತ್ತಿಗೆದಾರರ ಸಂಘದ ಜಗನ್ನಾಥ ಶೇಗಜಿ, ಮಲ್ಲಿಕಾರ್ಜುನ ಎಂ.ಎಸ್ ಮಾತನಾಡಿದರು. ನೀಲಕಂಠ ಜಮಾದಾರ, ಪತ್ನಿ ವಿಜಯಲಕ್ಷಿö್ಮ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಸವರಾಜ ಮತ್ತಿಮಡು, ಪ್ರಮುಖರಾದ ಶರಣಬಸಪ್ಪ ಪಾಟೀಲ್ ಅಷ್ಟಗಿ, ಪ್ರೇಮಸಿಂಗ್, ವಿಜಯದಶರಥ ಸಂಗನ್, ಜಗನ್ನಾಥ ಹಾಲಿಂಗೆ, ಮಾಣಿಕ್ ಎಸ್. ಕನಕಟ್ಟಿ, ಡಾ.ಬಿ.ಪಿ.ಬುಳ್ಳಾ, ಡಾ.ಮಲ್ಲಿಕಾರ್ಜುನ ಮುಕ್ಕಾ, ರಾಜು ಲೆಂಗಟಿ, ಬನ್ನಪ್ಪ ಬಿ.ಕೆ, ಸೈಬಣ್ಣ ವಡಗೇರಿ, ಸಂಪಾದಕ ರಾಜೇಂದ್ರ ಝಳಕಿ ಇತರರಿದ್ದರು. ಬಾಬುರಾವ ಕೋಬಾಳ ಪ್ರಾರ್ಥಿಸಿದರು. ಚಂದ್ರಕಾAತ ತಳವಾರ ಸ್ವಾಗತಿಸಿದರು. ಸಿದ್ದಪ್ಪ ಜಿ. ಮಹಾಗಾಂವ್ ಪ್ರಾಸ್ತಾವಿಕ ಮಾತನಾಡಿದರು. ಗೌರವ ಸಂಪಾದಕ ಬಿ.ಎಚ್.ನಿರಗುಡಿ ಆಶಯನುಡಿ ಆಡಿದರು. ಧರ್ಮರಾಜ ಜವಳಿ ವಂದಿಸಿದರು. ಶಿವಾನಂದ ಚಿಂಚೋಳಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net