ನಿಷ್ಠಾವಂತ ಕಾರ್ಯಕರ್ತರನ್ನು ಗೆಲ್ಲಿಸಿ: ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ

Yandigeri
Published on

ವಿಜಯಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು. ಇಲ್ಲಿನ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಸಕ್ರಿಯ ಕಾರ್ಯಕರ್ತರನ್ನು ಅಣಿಗೊಳಿಸಿ ಚುನಾವನೆಗೆ ನಿಲ್ಲಿಸಿ ಗೆಲ್ಲಿಸಲು ಪ್ರಯತ್ನ ಪಡಬೇಕು ಎಂದರು. ಆಯಾ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಜರುಗಿಸಿ ಆಕಾಂಕ್ಷೆವುಳ್ಳ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಆಯಾ ಗ್ರಾಪಂನಲ್ಲಿ ಗೆಲ್ಲಿಸಬೇಕು. ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದ ವತಿಯಿಂದ ಇಬ್ಬರಂತೆ ವೀಕ್ಷರನ್ನಾಗಿ ನೇಮಿಸಲಾಗುವುದು. ನೇಮಕಗೊಳ್ಳುವ ವೀಕ್ಷಕರು ಕೂಡಲೇ ಆಯಾ ತಾಲೂಕುಗಳಿಗೆ ಭೇಟಿ ನೀಡಿ, ಮುಖಂಡರೊಂದಿಗೆ ಚರ್ಚಿಸಿ, ಸಭೆಯನ್ನು ಏರ್ಪಡಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸೂಚಿಸಿದರು. ಮುಖಂಡರಾದ ಅಪ್ಪ್ಪುಗೌಡ ಪಾಟೀಲ, ಬಿ.ಡಿ.ಪಾಟೀಲ, ಮಂಗಳಾದೇವಿ ಬಿರಾದಾರ, ಪ್ರಭುಗೌಡ ಪಾಟೀಲ, ಅಪ್ಪಾಸಾಹೇಬ ಯರನಾಳ, ಎಸ್.ಎ.ಯರನಾಳ, ರಾಜು ಹಿಪ್ಪರಗಿ, ಚಂದ್ರಕಾಂತ ಹೀರೇಮಠ, ಹುಸೇನಬಾಗಾಯತ, ಅರವಿಂದ ಕಾಶನಕುಂಟೆ, ಎಂ.ಬಿ.ಕುಮಸಗಿ, ಮನ್ನಾನ ಶ್ಯಾಬಾದಿ, ಖಾದ್ರಿಇನಾಂದಾರ, ಸಿ.ಎ.ಇಂಚಗೇರಿ, ಮಾದೇವಿ ಬಿರಾದಾರ, ಕೌಸರ ಶೇಖ, ಯಾಕೂಬ ಕೂಪರ, ಅಮಸಿದ್ದಪ್ಪ ಬಳಗಾನೂರ, ಸುರೇಶ ಅಕ್ಕಿ, ಮುತ್ತಪ್ಪ ಬಿ. ಸಾರವಾಡ, ಸುಭಾಸ ನಾಯಕ, ಎಸ್.ಎ.ಇನಾಂದಾರ, ಅನ್ವರ ಮಕಾಂದಾರ, ಮಲ್ಲಿಕಾರ್ಜುನ ಅವಟಿ ಹಾಗೂ ಇನ್ನಿತರ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net