ನಿಷ್ಕಲ್ಮಶ ಮನದಿಂದ ಬದುಕು ರೂಪಿಸುವಾತ ಗುರು

11ydg06
Published on

ಯಾದಗಿರಿ: ಒಬ್ಬ ಶಿಕ್ಷಕ ತನ್ನ ವೃತ್ತಿ ಜೀವನದಲ್ಲಿ ತಾನು ಜ್ಞಾನಾರ್ಜನೆ ಮಾಡಿದ ವಿದ್ಯಾಥರ್ಿ, ಉನ್ನತ ಮಟ್ಟಕ್ಕೆ ತಲುಪಿದ ಕ್ಷಣದಲ್ಲಿ ಸಾರ್ಥಕ ಕಂಡುಕೊಳ್ಳುತ್ತಾನೆ ಎಂದು ಹೈದರಾಬಾದ್ ಉಸ್ಮಾನಿಯ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ.ಲಿಂಗಣ್ಣ ಗೋನಾಲ ಅಭಿಪ್ರಾಯಪಟ್ಟರು.

ತಾಲೂಕಿನ ಭೀಮರಾಯನ ಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ ಭಾನುವಾರ ತಾಲೂಕು ಕಸಾಪ ಸಹಯೋಗದಲ್ಲಿ ಉಪನ್ಯಾಸಕಿ ನಿರ್ಮಲಾ ತುಂಬಗಿ ಸಂಪಾದಿಸಿದ ನಿವೃತ್ತ ಡಿಡಿಪಿಯು ಚಂದ್ರಕಾಂತ ಹಿಳ್ಳಿ ವ್ಯಕ್ತಿತ್ವ ಕುರಿತ ಶಿಕ್ಷಣ ಚೇತನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಿಕ್ಷಕರು ವಿದ್ಯಾಥರ್ಿಗಳ ಬಗ್ಗೆ ತಾರತಮ್ಯ ಮಾಡದೆ, ಪಾಠ ಬೋಧನೆ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಸಮನಾಗಿ ಕಾಣುತ್ತಾರೆ. ಹಾಗಾಗಿಯೇ ಸಮಾಜದಲ್ಲಿ ಅವರಿಗೆ ಉನ್ನತ ಸ್ಥಾನವಿದೆ ಎಂದರು.

ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂಬ ಗಾದೆ ಮಾತಿನಂತೆ ಗುರುವಾದಾತ ನಿಷ್ಕಲ್ಮಶ ಮನದಿಂದ ವಿದ್ಯಾಥರ್ಿಗಳ ಬದುಕು ರೂಪಿಸುತ್ತಾನೆ. ಅವರ ಸಾಧನೆಗಳನ್ನು ನೋಡುತ್ತಲೇ ಖುಷಿ ಪಡುತ್ತಾನೆ. ನಮ್ಮ ಏಳಿಗೆಯ ಬಗ್ಗೆ ತಂದೆ,ತಾಯಿ, ಸ್ನೇಹಿತರು ಹೆಮ್ಮೆ ಪಡುವ ಮೊದಲ ಸಾಲಿನಲ್ಲಿ ಗುರು ನಿಂತಿರುತ್ತಾನೆ ಎಂಬುದನ್ನು ಯಾರೂ ಮರೆಯಕೂಡದು ಎಂದು ಹೇಳಿದರು.

ಸೇಡಂನ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಮಾತನಾಡಿ, ನನ್ನ ಶ್ರೇಷ್ಠ ಗುರು ಹಿಳ್ಳಿಯವರ ಶಿಷ್ಯನಾಗಿ ಅವರ ಪ್ರೇರಣೆ ಹಾಗೂ ಪ್ರೋತ್ಸಾಹದಿಂದ ನಾನು ಕೆಎಎಸ್ ಅಕಾರಿಯಾಗಿ ನೇಮಕಗೊಳ್ಳಲು ಸಾಧ್ಯವಾಯಿತು ಎಂದರು.

ಚಂದ್ರಕಾಂತ ಹಿಳ್ಳಿ ಮಾತನಾಡಿ, ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದೇನೆ ಎಂದರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು. ವೃತ್ತಿ ಬದುಕಿನಲ್ಲಿ ಅನೇಕ ಏರುಪೇರುಗಳ ನಡುವೆ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net