ನಿಷೇಧಾಜ್ಞೆ ಜಾರಿ

CTD T.VENKTESH--0005
Published on

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏ.15ರಿಂದ ನಗರದ ವಿವಿಧ ಪ್ರೌಢಶಾಲೆಗಳಲ್ಲಿ ನಡೆಯಲಿದ್ದು, ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ. ನಗರದ ವಾಸವಿ, ಸಂಪಿಗೆ ಸಿದ್ಧೇಶ್ವರ, ವಿದ್ಯಾವಿಕಾಸ, ಡಾನ್‌ಬಾಸ್ಕೋ, ಸಂತ ಜೋಸೆಫ್, ಚಿನ್ಮೂಲಾದ್ರಿ ಶಾಲೆಗಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಶಾಲೆಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಮೌಲ್ಯ ಮಾಪನ ಪೂರ್ಣ ಗೊಳ್ಳುವವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net