ನಿಶ್ಚಿತಾರ್ಥ ಮುನ್ನ ದಿನ ಅಪಘಾತದಲ್ಲಿ ಕೃಷಿ ಅಧಿಕಾರಿ ಸಾವು

CTD 20 VISHALKUMAR DEATH
Published on

ಚಿತ್ರದುರ್ಗ:ನಗರದ ಹೊರವಲಯ ಹೊಳಲ್ಕೆರೆ ರಸ್ತೆ ಬಳಿ ಶನಿವಾರ ಬೆಳಗ್ಗೆ 9.30ರ ಸಮಯದಲ್ಲಿ ಕಾರು-ಈಚರ್‌ಲಾರಿ ನಡುವೆ ಡಿಕ್ಕಿ ಯಾಗಿ ಹೊಳಲ್ಕೆರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ವಿಶಾಲ್‌ಕುಮಾರ್(29)ಅಸು ನೀಗಿದ್ದಾರೆ.
ಚಿತ್ರದುರ್ಗ ಮುನ್ಸಿಫಲ್ ಕಾಲನಿ ನಿವಾಸಿ ವಿಶಾಲ್‌ಕುಮಾರ್ ಆಂಜನೇಯ ದೇವಾಲಯಕ್ಕೆ ತೆರಳಿ ಅಲ್ಲಿಂದ ಕಚೇರಿಗೆ ತೆರಳಲು ತಮ್ಮ ಆ ಲ್ಟೋ ಕಾರಿನಲ್ಲಿ ಪ್ರಯಾಣಿಸಿದ್ದರು. ವಿಶಾಲ್‌ಕುಮಾರ್ ಅವರ ಮದುವೆಯ ನಿಶ್ಚಿತಾರ್ಥ ಭಾನುವಾರ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನೇರ ವೇರ ಬೇಕಿತ್ತು.
ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚರ್ಮದ ಲೋಡ್ ಇದ್ದ ಲಾರಿ ಹೊಳಲ್ಕೆರೆ ಕಡೆಯಿಂದ ತಮಿಳುನಾಡಿಗೆ ತೆರಳುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net