ನಿಶಿಕಾ ರಘು ಮಾಣೀರಗೆ ಚಿನ್ನದ ಪದಕ

24 gkp 02
Published on

  • ಕೊಡಗು : ಗೋವಾದ ಪಡ್ರೆ ಇಂಜಿನಿಯರಿಂಗ್ ಕಾಲೇಜಿನ 34ನೇ ಘಟಿಕೋತ್ಸವದಲ್ಲಿ ಕೊಡಗಿನ ವೆಸ್ಟ್ ನೆಮ್ಮಲೆಯ ನಿಶಿಕಾ ರಘು ಮಾಣೀರ, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಅತ್ಯಧಿಕ ಅಂಕಗಳಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ನಿಶಿಕಾ ಚಿನ್ನದ ಪದಕ ಸ್ವೀಕರಿಸಿದರು. ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಉಪಕುಲಪತಿ ಪ್ರೊ. ಹರಿಲಾಲ್ ಬಿ.ಮೆನೆನ್, ರಿಜಿಸ್ಟ್ರಾರ್ ಪ್ರೊ.ವಿಷ್ಣು ನಾಡಕಣಿ ಅವರ ಸಮ್ಮುಖದಲ್ಲಿ ಚಿನ್ನದ ಪದಕ ಪಡೆದರು. ನಿಶಿಕಾ, ವೆಸ್ಟ್ ನೆಮ್ಮಲೆಯ ಮಾಣೀರ ರಘು ನಂಜಪ್ಪ ಮತ್ತು ರೂಪಾ (ತಾಮನೆ ಕೊಣಿಯಂಡ) ದಂಪತಿ ಕಿರಿಯ ಪುತ್ರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net