ನಿವೇಶನಗಳ ಮಣ್ಣುಹೊತ್ತು ಪಾದಯಾತ್ರೆ!

bnk gp
ಹಕ್ಕುಪತ್ರಕ್ಕಾಗಿ ಪಾದಯಾತ್ರೆ ಮಾಡುತ್ತಿರುವ ನಿಡುವಾಳೆ ಗ್ರಾಪಂ ಉಪಾಧ್ಯಕ್ಷ ನವೀನ್ ಹಾವಳಿ.
Published on

ಬಣಕಲ್: ನಿಡುವಾಳೆ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ಅವರು ವಿನೂತನ ರೀತಿಯ ಹೋರಾಟಕ್ಕೆ ಇಳಿದಿದ್ದಾರೆ.

20ಕ್ಕೂ ಹೆಚ್ಚು ನಿವೇಶನಗಳ ಮಣ್ಣನ್ನು ಸಂಗ್ರಹಿಸಿ ನಿಡುವಾಳೆಯಿಂದ ಮೂಡಿಗೆರೆ ತಹಸೀಲ್ದಾರ್ ಕಚೇರಿವರೆಗೆ ಅರೆಬೆತ್ತಲೆ ಪಾದಯಾತ್ರೆ ನಡೆಸುತ್ತಿದ್ದಾರೆ.

ಹೋರಾಟವು ಅಧಿಕಾರಿಗಳ ನಿರ್ಲಕ್ಷ್ಯತೋರ್ಪಡಿಸುವ ಗಂಭೀರ ಯತ್ನವಾಗಿದೆ. ಹಲವಾರು ಬಾರಿ ತಹಸೀಲ್ದಾರ್ ಕಚೇರಿಗೆ ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಬೇಸರಗೊಂಡ ನವೀನ್ ಹಾವಳಿ ಅವರು ಬುಧವಾರ ಅರೆಬೆತ್ತಲೆ ಪಾದಯಾತ್ರೆ ಆರಂಭಿಸಿದ್ದಾರೆ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇಬೇಕು. ಹತ್ತಾರು ವರ್ಷಗಳಿಂದ ಗ್ರಾಮಸ್ಥರು ತಲುಪಿಸುತ್ತಿರುವ ಮನವಿಗೆ ನಿರ್ಲಕ್ಷ್ಯ ತೋರಲಾಗಿದೆ. ಗ್ರಾಮಸ್ಥರಿಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ನವೀನ್ ಹಾವಳಿ ಹೇಳಿದ್ದಾರೆ. ನಿಡುವಾಳೆಯಿಂದ ಮೂಡಿಗೆರೆಗೆ ಸುಮಾರು 25 ಕಿಮೀ ದೂರವಿದ್ದು, ನವೀನ್ ಹಾವಳಿ ಅವರು ಮೂಡಿಗೆರೆಗೆ ತಲುಪಿ ಅಧಿಕಾರಿಗಳನ್ನು ಭೇಟಿ ಮಾಡಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬಹುದು ಎಂಬ ನಿರೀಕ್ಷೆ ಜನರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net