ನಿವೇಶನ ಹಂಚಿಕೆ ಭರವಸೆ

23ald-1 web
Published on

ಆಲ್ದೂರು: ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಸರ್ವೆ ನಂಬರ್ 167/1ರಲ್ಲಿ ನಿವೇಶಕ್ಕಾಗಿ ಶೆಡ್ ಹಾಕಿಕೊಂಡು ಹೋರಾಟ ಮಾಡುತ್ತಿರುವವರನ್ನು ಮಂಗಳವಾರ ಚಿಕ್ಕಮಗಳೂರು ತಹಸೀಲ್ದಾರ್ ವಿನಯ್ ಸಾಗರ್ ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಮಾಚಗೊಂಡನಹಳ್ಳಿ, ಸತ್ತಿಹಳ್ಳಿ, ಯಲಗುಡಿಗೆ ಗ್ರಾಮದ ಸುಮಾರು 70 ನಿವೇಶನ ರಹಿತ ಕುಟುಂಬಗಳು ಸುಮಾರು 5 ವರ್ಷಗಳಿಂದ ಶೆಡ್ ನಿರ್ವಿುಸಿಕೊಂಡಿದ್ದಾರೆ. ಇವರೊಂದಿಗೆ ತಹಸೀಲ್ದಾರ್ ಮಾತುಕತೆ ನಡೆಸಿದರು. ಕಂದಾಯ ಇಲಾಖೆ, ಸತ್ತಿಹಳ್ಳಿ ಗ್ರಾಪಂ, ಅರಣ್ಯ ಇಲಾಖೆಯವರು ರ್ಚಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಹೋರಾಟಗಾರ ವಿನೋದ್ ವಿಜಯವಾಣಿಯೊಂದಿಗೆ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗೌತಮ್ ಬಗಾದಿ ಅವರು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ನಂತರ ಶಾಸಕ ಎಂ.ಪಿ.ಕುಮಾರಸ್ವಾಮಿ ಮೂರು ಬಾರಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖೆಯವರು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net