

ಚಿತ್ರದುರ್ಗ: ನಿರ್ವಸತಿಗರಿಗೆ ನಿವೇಶನ ಮತ್ತು ಸೂರು ಒದಗಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಶನಿವಾರ ಚಿತ್ರದುರ್ಗ ತಾಲೂಕು ಗುಡ್ಡದ ರಂಗವ್ವನಹಳ್ಳಿ ಹಾಗೂ ಮಠದ ಕುರುಬರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿತು.
ಮಠದ ಕುರುಬರಹಟ್ಟಿ, ಗುಡ್ಡದರಂಗವ್ವನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನಿವೇಶನ, ಮನೆಗಳಿಲ್ಲದವರನ್ನು ಗುರುತಿಸಿ ವಸತಿ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ತಾಲೂಕು ಕಾರ್ಯದರ್ಶಿ ಟಿ.ಆರ್. ಉಮಾಪತಿ, ಸಹ ಕಾರ್ಯದರ್ಶಿ ಇ. ಸತ್ಯಕೀರ್ತಿ, ಜಿಲ್ಲಾ ಸಹ ಕಾರ್ಯದರ್ಶಿ ಬಿ.ಎಚ್. ಹನುಮಂತಪ್ಪ, ಕಟ್ಟಡ ಕಾರ್ಮಿಕರ ಸಂಘದ ಬಾಬು, ರಫಿ, ಶಿವು, ಫರ್ವಿನ್‌ತಾಜ್, ಸುವರ್ಣಮ್ಮ, ವಸತಿ ರಹಿತರ ಹೋರಾಟ ಸಮಿತಿ ಪದಾಧಿಕಾರಿಗಳು ಇದ್ದರು.