ನಿವೇಶನ ಇಲ್ಲದವರಿಗೆ 3 ತಿಂಗಳಲ್ಲಿ ಸೈಟ್: ಶಾಸಕ ಹರತಾಳು ಹಾಲಪ್ಪ ಭರವಸೆ

WEB SGR
Published on

ಸಾಗರ: ಪ್ರತಿಯೊಬ್ಬ ಮನುಷ್ಯನಿಗೂ ಮೂಲ ಸೌಕರ್ಯ ನೀಡಬೇಕಾದುದ್ದು ನಮ್ಮ ಜವಾಬ್ದಾರಿ. ಆ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ 2021-22ನೇ ಸಾಲಿನ ವಾಜಪೇಯಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಯಾದೇಶ ವಿತರಣೆ ಮಾಡಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಸ್ವಂತ ಸೂರು ಹೊಂದಬೇಕು. ಮನೆ ಕಟ್ಟಿಕೊಳ್ಳುವವರಿಗೆ ಸರ್ಕಾರ ವಿವಿಧ ಯೋಜನೆಯಡಿ ಸಹಾಯಧನ ವಿತರಣೆ ಮಾಡುತ್ತಿದೆ. ಸರ್ಕಾರದ ನಿಯಮಾನುಸಾರ ಮನೆ ಕಟ್ಟಿಕೊಳ್ಳಬೇಕು. ಯಾರಿಗೆ ನಿವೇಶನ ಇಲ್ಲವೋ, ಬಾಡಿಗೆ ಮನೆಯಲ್ಲಿದ್ದಾರೋ ಅಂತಹವರನ್ನು ಗುರುತಿಸಿ ಮುಂದಿನ ಎರಡು ಮೂರು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ. ನಿವೇಶನ ಹಂಚಿಕೆ ಜತೆಗೆ ವಿವಿಧ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಸಹ ಗಮನ ಹರಿಸಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಜನರು ಗಮನ ಹರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net