ನಿವೇದಿತಾಳ ಬಾಳೀಗ ಪ್ರಸನ್ನ

26-KLB- Nanda gokul -
Published on

ಕಲಬುರಗಿ: ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಬುಧವಾರ ನಂದಗೋಕುಲದ ಕನ್ಯಾಮಣಿ ನಿವೇದಿತಾಳ ವಿವಾಹ ಸಿಂದಗಿ ತಾಲೂಕಿನ ದೇವಣಗಾಂವದ ಪ್ರಸನ್ನ ದೇಶಪಾಂಡೆ ಜತೆ ನೆರವೇರಿತು.
ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಎಲ್ಲ ಸಂಪ್ರದಾಯಗಳು ನಡೆದವು. ಬುಧವಾರ ಬೆಳಗ್ಗೆ 8.40ಕ್ಕೆ ದೇವರ ಅಕ್ಷತೆ, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ಅಕ್ಷತಾರೋಪಣ ನೆರವೇರಿತು. ವಧುವಿನ ಕಡೆಯಿಂದ ಪ್ರತಿಭಾ, ಸುನೀಲ ಕುಲಕರ್ಣಿ ದಂಪತಿ ದೇಶಪಾಂಡೆ ಮನೆತನಕ್ಕೆ ಕನ್ಯಾದಾನ ಮಾಡಿಕೊಟ್ಟರು. ವರನ ಕಡೆಯಿಂದ ತಂದೆ ತಾಯಿಗಳಾದ ಪ್ರಭಾವತಿ, ಪ್ರಹ್ಲಾದರಾವ ದೇಶಪಾಂಡೆ ಪುಣ್ಯಾಹವಚನ ನೆರವೇರಿಸಿದರು.
ಇದು ಅನಾಥಾಶ್ರಮದ ಹುಡುಗಿಯ ಮದುವೆ ಎಂದು ಅನಿಸಲೇ ಇಲ್ಲ. ಗುರುನಾಯಕರ ಕನಸು ಇಂದು ನನಸಾಯಿತು. ಅವರು ನಂದಗೋಕುಲದಲ್ಲಿ ಆನಂದದ ಕ್ಷಣ ನೋಡಬೇಕು ಎಂದು ಬಯಸಿದ್ದರು. ಇಂದು ಅವರು ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರು ಎಂದು ಜನರು ಮಾತಾಡಿಕೊಳ್ಳುತ್ತಿದ್ದರು.

ವಿವಾಹಕ್ಕೆ ಸಾಕ್ಷಿಯಾದವರು
ವಿಶ್ವ ಹಿಂದುಪರಿಷತ್ನ ಪ್ರಮುಖ ಲಿಂಗರಾಜಪ್ಪ ಅಪ್ಪ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಹಿರಿಯ ನ್ಯಾಯವಾದಿ ರಾಘವೇಂದ್ರ ನಾಡಗೌಡ, ಮುಖಂಡರಾದ ಜಯಶ್ರೀ ಮತ್ತಿಮೂಡ, ಡಾ. ಎಸ್.ಎಸ್.ಗುಬ್ಬಿ, ಶಿವರಾಜ ದಿಗ್ಗಾವಿ, ರಾಘವೇಂದ್ರ ಕುಲಕರ್ಣಿ ಕೋಗನೂರ, ಹಷರ್ಾನಂದ ಗುತ್ತೇದಾರ, ಸುಭಾಷ್ ಕಮಲಾಪುರ, ದಯಾಘನ್ ಧಾರವಾಡಕರ್, ಪ್ರಹ್ಲಾದ ಪೂಜಾರಿ, ರಾಘವೇಂದ್ರ ಕುಲಕರ್ಣಿ ನೀಲೂರ, ಕೃಷ್ಣಾ ಜೋಶಿ, ಪಾಂಡುರಾಂಗರಾವ ಕಂಪ್ಲಿ, ಗುಂಡಣ್ಣ ಡಿಗ್ಗಿ, ಡಾ.ಸುರೇಶ ಹೇರೂರ, ಹಿರಿಯ ಪತ್ರಕರ್ತ ಎಸ್.ಆರ್. ಮಣೂರ, ವಿಶ್ವನಾಥ ಕುಲಕಣರ್ಿ, ಪ್ರಕಾಶ ಕುಲಕಣರ್ಿ ಸರಡಗಿ, ವಿಠ್ಠಲರಾವ ಕುಲಕಣರ್ಿ, ಪ್ರಹ್ಲಾದ ಕುಲಕಣರ್ಿ, ಮಾಣಿಕ ಕುಲಕಣರ್ಿ, ಡಾ. ಗಿರೀಶ ಗಲಗಲಿ, ನಂದಗೋಕುಲದ ಮಾತಾಜಿ ಸುಧಾ, ಜ್ಯೋತಿ ಲಾತೂರಕರ್, ಸಂಗೀತಾ ನಾಯಕ ಪಾಲ್ಗೊಂಡಿದ್ದರು.

ಸಂಗೀತದ ನೀನಾದ
ಮದುವೆ ಸಮಾರಂಭದಲ್ಲಿ ಸಂಗೀತದ ನೀನಾದ ಕಿವಿಗೆ ಇಂಪು ನೀಡುವಂತಿತ್ತು. ಜಾಹ್ನವಿ ಮೆಲೋಡಿಸ್ನ ರತ್ನಾಕರ ಕುಲಕರ್ಣಿ ಹಾಗೂ ಸಂಗಡಿಗರು ಉಚಿತ ಸಂಗೀತ ಸೇವೆ ಸಲ್ಲಿಸುವ ಮೂಲಕ ಮದುವೆಗೆ ಆಗಮಿಸಿದ ಜನರಿಗೆ ರಂಜಿಸಿದರು.

ನಿವೇದಿತಾಳಿಗೆ ಬಾಳು ಕೊಟ್ಟಿದ್ದಕ್ಕೆ ನನಗೆ ಖುಷಿ ತಂದಿದೆ. ಯಾರೂ ಇಲ್ಲ ಎಂಬ ಭಾವನೆ ಅವಳಲ್ಲಿ ಮೂಡದಂತೆ ಹಾಗೂ ಯಾವ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವೆ.
| ಪ್ರಸನ್ನ, ನಿವೇದಿತಾಳ ಕೈ ಹಿಡಿದ ವರ


ನಂದಗೋಕುಲ ಬಿಟ್ಟು ಹೋಗುತ್ತಿರುವುದು ದು:ಖವಾಗುತ್ತಿದೆ. ತಂದೆ ತಾಯಿ ಮುಖ ನೋಡದ ನನಗೆ ಅನಾಥ ಪ್ರಜ್ಞೆ ಕಾಡದಂತೆ ನಂದಗೋಕುಲದಲ್ಲಿ ಸುಧಾ ಮಾತಾಜಿ ಹಾಗೂ ಎಲ್ಲರೂ ನನ್ನನ್ನು ನೋಡಿಕೊಂಡಿದ್ದಾರೆ. ಬಾಳು ಕೊಟ್ಟ ಪ್ರಸನ್ನ ಅವರಿಗೂ ಮತ್ತು ಅವರ ಕುಟುಂಬದವರಿಗೆ ಆಭಾರಿಯಾಗಿದ್ದೇನೆ.
| ನಿವೇದಿತಾ, ನಂದಗೋಕುಲದ ಕನ್ಯಾಮಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net