ನಿವೃತ್ತಿಗೊಂಡ ಯೋಧರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ

ನಿವೃತ್ತಿಗೊಂಡ ಯೋಧರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ
Published on

ಹಾಸನ: ದೇಶದ ವಿವಿಧ ಗಡಿ ಭಾಗದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತಿಯಾದ ನಂತರ ತವರಿಗೆ ವಾಪಸ್ ಆದ 14 ಜನ ಬಿ.ಎಸ್.ಎಫ್. ಯೋಧರಿಗೆ ನಗರದಲ್ಲಿ ಬೈಕ್ ರ‌್ಯಾಲಿ ಮೂಲಕ ಅದ್ಧೂರಿ ಸ್ವಾಗತ ನೀಡಿ ತೆರದ ವಾಹನದಲ್ಲಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ನಗರದ ಭಾಗವಾದ ಮಹಾರಾಜ ಪಾರ್ಕ್‌ನ ಹೇಮಾವತಿ ಪ್ರತಿಮೆಯ ಬಳಿ ನಿವೃತ್ತ ಯೋಧರಾದ ಕೆ.ಕೆ. ಮೂರ್ತಿ, ಬಿ.ಎನ್. ಲೋಕೇಶ್, ಅನಂತರಾಮು, ಜಿ.ಡಿ. ಯೋಗೀಶ್, ಎಂ.ಪಿ. ಲೋಕೇಶ್, ಎಚ್.ಪಿ. ರವಿ, ಎಸ್.ಸಿ. ಹರೀಶ್, ಎನ್.ಡಿ. ಸ್ವಾಮಿ, ಅಶೋಕ್, ಗೋವಿಂದರಾಜು, ಗುರುಮೂರ್ತಿ, ಪ್ರೇಮ್, ಪರಮೇಶ್, ಜಗದೀಶ್ ಇವರಿಗೆ ಹೂವಿನ ಮಾಲೇ ಹಾಕಿ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ತರೆದ ವಾಹನದಲ್ಲಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿಯವರ ಕಛೇರಿ ಹಾಗೂ ಡೈರಿ ವೃತ್ತದ ಮುಖಾಂತರ ಹಾಯ್ದು ಕೆಂಚಟಹಳ್ಳಿಯಲ್ಲಿ ಇರುವ ನಮ್ಮ ನಿವೃತ್ತ ಅರಸೇನಾ ಪಡೆಯ ಕಟ್ಟಡದ ಹತ್ತಿರಕ್ಕೆ ಕರೆದುಕೊಂಡು ಬರಲಾಯಿತು.
ನೀವೃತ್ತ ಯೋಧರ ಸಂಘದ ಎಂ.ಜಿ. ರಮೇಶ್ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕಿನ 14 ಜನ ಬಿ.ಎಸ್.ಎಫ್. ಯೋಧರು ಹಲವಾರು ವರ್ಷಗಳ ಕಾಲ ದೇಶ ಸೇವೆ ಮಾಡಿದ್ದಾರೆ. ಈಡಿ ಕುಟುಂಬವನ್ನು ಬಿಟ್ಟ ದೇಶದ ಗಡಿ ಭಾಗದಲ್ಲಿ ತಮ್ಮ ಜೀವವನ್ನೆ ಮುಡುಪಾಗಿ ಇಟ್ಟು ಮಳೆ, ಛಳಿ, ಗಾಳಿ, ಬಿರುಗಾಳಿ, ಎನ್ನದೆ ಜಮ್ಮು ಕಾಶ್ಮೀರದಂತಹ ಮಂಜುಗಡ್ಡೆ ಜಾಗದಲ್ಲಿ ಮೈ ಜುಮ್ಮೆನಿಸುವ ಛಳಿಯಲ್ಲಿ ನಿಂತು ಗಡಿಯ ಭಾಗದಲ್ಲಿ ಉಗ್ರವಾದಿಗಳೊಂದಿಗೆ ಹೋರಾಟ ಮಾಡುತ್ತಾರೆ ಎಂದು ಹೇಳಿದರು.
ಛತ್ತೀಸ್‌ಘಡದಂತಹ ರಾಜ್ಯದಲ್ಲಿ ಮಾವವಾದಿಯಂತಹ ಉಗ್ರವಾದಿಗಳ ವಿರುದ್ದ ಹೋರಾಟ ನಡೆಸಿ, ದೇಶದಲ್ಲಿ ಆಗುವಂತಹ ಜಲ ಪ್ರವಾಹದಲ್ಲಿ ಸಿಲುಕಿಕೊಂಡಂತ ಸಾರ್ವಜನಿಕರನ್ನು ರಕ್ಷಿಸುವ ಪಡೆಯಲ್ಲಿ ಸೇವೆ ಮಾಡಿ ಹಾಗೂ ದೇಶದ ಜನರನ್ನು ರಕ್ಷಿಸಿ ಹಾಗೂ ದೇಶದಲ್ಲಿ ನಡೆಯುವಂತಹ ಎಲ್ಲಾ ರಾಜ್ಯದ ಚುನಾವಣೆಗಳಲ್ಲಿ ಆಂತರಿಕ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಸೇವೆ ಸಲ್ಲಿಸಿ ಈ ದಿನ ಸುರಕ್ಷಿತವಾಗಿ ತಮ್ಮ ತವರಿಗೆ ವಾಪಸ್ಸು ಬಂದಿರುತ್ತಾರೆ ಅವರ ಸೇವೆ ಶ್ಲಾಘನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ತವ್ಯ ನಿರ್ವಹಿಸಿ ವಾಪಸ್ ಬಂದಿರುವ 14 ನಿವೃತ್ತ ಯೋಧರಿಗೆ ಗೌರವಿಸಲು 100 ಬೈಕುಗಳು ಹಾಗೂ ಒಂದು ಓಪನ್ ಜೀಪಿನ ರಾಲಿಯನ್ನು ಶಾಂತಿಯುತ ಮೆರವಣಿಗೆಯ ಭಾಗವಹಿಸಿದರು.
ಇದೆ ವೇಳೆ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಲಕ್ಷ್ಮೀಕಾಂತ್, ಖಜಾಂಚಿ ಮಲ್ಲೇಶ್ ಗೌಡ, ನಿರ್ದೇಶಕ ಲಿಂಗರಾಜು, ಆರ್.ಎಂ. ಹನುಮಂತಪ್ಪ, ನಿಂಗೇಗೌಡ, ಕುಮಾರ್, ವಿಜಯಕುಮಾರ್, ಪಿ.ವಿ. ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net