ನಿವೃತ್ತರಾದ ಬಸವರಾಜ್‌ ಅವರಿಗೆ ಅಭಿನಂದನೆ

4 ckm 4
ಚಿಕ್ಕಮಗಳೂರು ಬೈಪಾಸ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನ ಬ್ರಾಂಚ್ ಆಫೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಇತ್ತೀಚೆಗೆ ನಿವೃತ್ತರಾದ.ಆರ್. ಬಸವರಾಜ್ ಮತ್ತು ದಂಪತಿಯನ್ಗನು ಸನ್ಮಾನಿಸಿ ಅಭಿನಂದಿಸಲಾಯಿತು.
Published on
ಚಿಕ್ಕಮಗಳೂರು: ಕಳೆದ ನಾಲ್ಕು ದಶಕಗಳಿಂದ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಕೆ.ಆರ್. ಬಸವರಾಜ್ ಅವರನ್ನು ಕೆನರಾ ಬ್ಯಾಂಕ್‌ನ ಸಿಬ್ಬಂದಿ ಸೇರಿದಂತೆ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

ನಗರದ ಬೈಪಾಸ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನ ಬ್ರಾಂಚ್ ಆಫೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಕೆ.ಆರ್. ಬಸವರಾಜ್ ಮತ್ತು ದಂಪತಿಗಳನ್ನು ಸನ್ಮಾನಿಸಿ, ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು ಈ ಸಂದರ್ಭದಲ್ಲಿ ಬ್ಯಾಂಕಿನ ಸಂಘಟನೆಗಳ ಮುಖಂಡರಾದ ಉಜ್ವಲ್ ಪಡುಬಿದ್ರಿ ಮಾತನಾಡಿ, ಕೆನರಾ ಬ್ಯಾಂಕಿನ ಯೂನಿಯನ್ ಮತ್ತು ಬ್ಯಾಂಕ್ ನೌಕರರ ಸಂಘಟನೆಯಲ್ಲಿ ಬಸವರಾಜ್ ಅವರ ಸೇವೆಯನ್ನು ಸ್ಮರಿಸಿ ಬ್ಯಾಂಕ್ ನೌಕರರ ಸಂಘಟನೆಯಲ್ಲಿ ಸಿಬ್ಬಂದಿಗಳಿಗೆ ಅವರಿಂದಾದ ಅನುಕೂಲಗಳನ್ನು ವಿವರಿಸಿದರು. ಬ್ಯಾಂಕ್ ನೌಕರರ ಸಂಘದ ಮುಖಂಡ ಗಣೇಶ್ ಮಾತನಾಡಿ ಬಸವರಾಜ್ ಅವರ ನಿವೃತ್ತಿಯಿಂದ ನೌಕರರ ಸಂಘಟನೆಗೆ ನಷ್ಟವಾಗಿದೆ. ಕೆನರಾ ಬ್ಯಾಂಕಿನ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಚಿಕ್ಕಮಗಳೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬ್ಯಾಂಕ್‌ನ ನೌಕರರ ಹಿತರಕ್ಷಣೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ನಿವೃತ್ತಿಯ ನಂತರವೂ ಅವರ ಸೇವೆ ಸಂಘಟನೆಗೆ ಅಗತ್ಯವಾಗಿದೆ ಎಂದರು. ಬ್ಯಾಂಕ್ ನೌಕರರನ್ನು ಕೇವಲ ನೌಕರರಂತೆ ನೋಡದೇ ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ಮುಂದೆಯೂ ಅದೇ ರೀತಿ ನೌಕರರನ್ನು ನೋಡಿಕೊಳ್ಳಲಿದ್ದಾರೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ನೌಕರ ಕೆ.ಆರ್. ಬಸವರಾಜ್ ಮಾತನಾಡಿ, ನಾನು ಬ್ಯಾಂಕ್ ಸೇವೆಯಿಂದ ನಿವೃತ್ತನಾದರೂ ಬ್ಯಾಂಕ್ ನೌಕರರ ಸಂಘಟನೆಯ ಬೆಳವಣಿಗೆಗೆ ನಿಮ್ಮೊಂದಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿ, ನೌಕರರ ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ಋಣಿಯಾಗುತ್ತೇನೆ ಎಂದರು.

ಬ್ಯಾಂಕ್ ನೌಕರರ ಸಂಘಟನೆಗಳ ಮುಖಂಡರಾದ ನಿವೃತ್ತ ನೌಕರರಾದ ಹಾಲಪ್ಪ, ಹಾಗೂ ಭಾಗ್ಯ, ಪ್ರಕಾಶ್, ಕೃಷ್ಣಶೆಟ್ಟಿ, ಕೌಶಿಕ್, ನವೀನ್ ಕುಮಾರ್, ಪ್ರದೀಪ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net