ನಿವೃತ್ತ ಶಿಕ್ಷಕರಿಗೆ ಸನ್ಮಾನ

11 HANUR 4
Published on

ಹನೂರು: ಸಮೀಪದ ಕಾಮಗೆರೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ ವಿವಿಧ ಶಾಲೆಗಳಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಿವೃತ್ತಿ ಹೊಂದಿದ ಕುರುಬರದೊಡ್ಡಿ ಸರ್ಕಾರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಮಹದೇವ್, ಮಂಗಲ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೆ.ಮರಯ್ಯ, ಹನೂರು ಬಿಎಂಜಿ ಪ್ರೌಢಶಾಲೆಯ ಸಹಶಿಕ್ಷಕ ನಂಜಪ್ಪ ಹಾಗೂ ರಾಮಾಪುರ ಜೆಎಸ್‌ಎಸ್ ಶಾಲೆಯ ಶಿಕ್ಷಕ ಬಿ.ವಿ.ರಂಗಯ್ಯ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಬಿಇಒ ಕಚೇರಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ಬಡ್ತಿ ಪಡೆದು ಮಂಡ್ಯ ಜಿಲ್ಲೆ ಉಪ ನಿರ್ದೇಶಕರ ಕಚೇರಿಯಲ್ಲಿ ಡಿವೈಪಿಸಿಯಾಗಿ ವರ್ಗಾವಣೆಯಾದ ಎಂ. ಮಹದೇವ ಅವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಸಿ.ಮಾದೇಶ್, ಕಾರ್ಯದರ್ಶಿ ಸ್ವಾಮಿ, ಗೌರವಾಧ್ಯಕ್ಷ ಚಂದ್ರಶೇಖರಯ್ಯ, ಸದಸ್ಯರಾದ ಗಿರೀಶ್, ರವೀಶ್, ಬಿಆರ್‌ಸಿ ಮಹದೇವಕುಮಾರ್, ಉಪನ್ಯಾಸಕ ನಂಜುಂಡಯ್ಯ, ಶಿಕ್ಷಕ ಕೆಂಚಪ್ಪ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net