ನಿವೃತ್ತ ಶಿಕ್ಷಕನಿಗೆ ಸಾರೋಟು ಮೆರವಣಿಗೆ

Untitled design (6)
ಕನಕಗಿರಿ ತಾಲೂಕಿನ ಕನಕಾಪುರ ಶಾಲೆಯಲ್ಲಿ 8 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ ಹನುಮಗೌಡ ಪೊಲೀಸ್ ಪಾಟೀಲ್ ದಂಪತಿಯನ್ನು ಸಾರೋಟಿನಲ್ಲಿ ಗುರುವಾರ ಮೆರವಣಿಗೆ ಮಾಡಲಾಯಿತು.
Published on

ಕನಕಗಿರಿ: ತಾಲೂಕಿನ ಕನಕಾಪುರ ಶಾಲೆಯಲ್ಲಿ 8 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ ಹನುಮಗೌಡ ಪೊಲೀಸ್ ಪಾಟೀಲ್ ದಂಪತಿಯನ್ನು ಸಾರೋಟಿನಲ್ಲಿ ಕೂರಿಸಿ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಗುರುವಾರ ಮೆರವಣಿಗೆ ಮಾಡಿದರು.


ಶಿಕ್ಷಕ ಹನುಮಗೌಡ ಪೊಲೀಸ್ ಪಾಟೀಲ್ ನಿವೃತ್ತಿ ಅಂಗವಾಗಿ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು ಹಬ್ಬದ ವಾತಾವರಣ ಸೃಷ್ಠಿಸಿದ್ದರು. ಶಿಕ್ಷಕ ದಂಪತಿಯನ್ನು ಗ್ರಾಮಸ್ಥರು ಡೊಳ್ಳು ವಾದ್ಯದೊಂದಿಗೆ ಸಾರೋಟು ಮೆರವಣಿಗೆ ಮಾಡಿದರು. ಅಲ್ಲದೇ ಊರಿಗೆ ಊಟ ಹಾಕಿಸಿ, ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ, ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net