ನಿವೃತ್ತ  ವಾಣಿಜ್ಯ ತೆರಿಗೆ ಅಧಿಕಾರಿ ಜಿ ಆರ್ ಮಂಜೇಶ್ ರವರ ತಾಯಿ ಶಂಕರಮ್ಮ ನಿಧನ

ನಿವೃತ್ತ  ವಾಣಿಜ್ಯ ತೆರಿಗೆ ಅಧಿಕಾರಿ ಜಿ ಆರ್ ಮಂಜೇಶ್ ರವರ ತಾಯಿ ಶಂಕರಮ್ಮ ನಿಧನ
Published on

ಹಾಸನ : ತಾಲೂಕಿನ ಶಾಂತಿಗ್ರಾಮದ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ಅಧ್ಯಕ್ಷ ಹಾಗೂ ನಿವೃತ್ತ  ವಾಣಿಜ್ಯ ತೆರಿಗೆ ಅಧಿಕಾರಿ ಜಿ ಆರ್ ಮಂಜೇಶ್ ರವರ ತಾಯಿ, ದಿ ರಾಮಕೃಷ್ಣಯ್ಯ ಅವರ ಪತ್ನಿ ಶಂಕರಮ್ಮ( 94) ಅವರು ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು.

  ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ಶಾಂತಿ ಗ್ರಾಮದಲ್ಲಿ ನೆರವೇರಿತು. ಮೃತರು ಮಂಜೇಶ್ ಹಿರಿಯಣ್ಣಯ್ಯ ಸೇರಿದಂತೆ ಐವರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ರಾಜ್ಯ, ಹಾಗೂ ಜಿಲ್ಲಾ ದೇವಾಂಗ ಸಂಘ ಹಾಗೂ ನೌಕರ ಸಂಘದ ಪದಾಧಿಕಾರಿಗಳು ಅಪಾರ  ಸಂಖ್ಯೆಯ ಬಂಧು -ಮಿತ್ರರು ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net