ನಿವೃತ್ತ ಯೋಧರಿಗೆ ಅದ್ದೂರಿ ಸ್ವಾಗತ

A warm welcome to veterans
ಸೇನೆಯಿಂದ ತವರಿಗೆ ಮರಳಿದ ಸದಾಶಿವಯ್ಯ ಮಠ ಅವರನ್ನು ಮುದ್ದೇಬಿಹಾಳ ಪಟ್ಟಣದ ಕಾರ್ಗಿಲ್ ಹುತಾತ್ಮ ಯೋಧ ದಾವಲ್‌ಸಾಬ್ ಕಂಬಾರ ಸ್ಮಾರಕದಲ್ಲಿ ಮಂಗಳವಾರ ನಾಗರಿಕರು ಸೆಲ್ಯೂಟ್ ಮಾಡಿ ಸ್ವಾಗತಿಸಿಕೊಂಡರು.
Published on

ಮುದ್ದೇಬಿಹಾಳ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಆಗಮಿಸಿದ ಪಟ್ಟಣದ ಯೋಧ ಸದಾಶಿವಯ್ಯ ಮಠ ಅವರನ್ನು ಮಂಗಳವಾರ ಇಲ್ಲಿನ ಮಾಜಿ ಸೈನಿಕರ ಸಂಘದವರು, ಕುಟುಂಬಸ್ಥರು, ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮಿತಿ ಪದಾಧಿಕಾರಿಗಳು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಮೆರವಣಿಗೆಯಲ್ಲಿ ಯೋಧ ಸದಾಶಿವಯ್ಯ ಜತೆಗೆ ಮಾಜಿ ಸೈನಿಕರು, ಸ್ನೇಹಿತರು ಹಳೇ ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ಕಾರ್ಗಿಲ್ ಸ್ಮಾರಕಕ್ಕೆ ಆಗಮಿಸಿದರು. ನಿವೃತ್ತ ಯೋಧ ಸದಾಶಿವಯ್ಯ ಮಠ ಅವರು, ಹುತಾತ್ಮ ಯೋಧ ದಾವಲ್‌ಸಾಬ್ ಕಂಬಾರ ಪುತ್ಥಳಿಗೆ ಹೂಮಾಲೆ ಅರ್ಪಿಸಿ ನಮಿಸಿದರು.

ನಿವೃತ್ತ ಯೋಧ ಸದಾಶಿವಯ್ಯ ಮಠ ಮಾತನಾಡಿ, ದಾವಲಸಾಬ್ ಹುತಾತ್ಮರಾದ ದಿನದಂದೇ ನನಗೆ ಆರ್ಮಿಯಲ್ಲಿ ಕೆಲಸದ ಆದೇಶ ಬಂದಿತ್ತು. 1999ರಲ್ಲಿ ಮಹಾರಾಷ್ಟ್ರದಲ್ಲಿ ತರಬೇತಿ ಮುಗಿಸಿಕೊಂಡು 2000ರಲ್ಲಿ ಅಹ್ಮದನಗರ, ಅಂಬಾಲಾ, 2001ರಲ್ಲಿ ರಾಜಸ್ತಾನ, 2003ರಲ್ಲಿ ಸೂರತ್‌ಘಡ, 2006ರಲ್ಲಿ ಹೈದ್ರಾಬಾದ್, 2011ರಲ್ಲಿ ಸಿಕಂದರಾಬಾದ, 2014ರಲ್ಲಿ ಜಮ್ಮು ಕಾಶ್ಮೀರದ ಸಾಂಬಾ, 2018ರಲ್ಲಿ ಪಂಜಾಬ್‌ದ ಪಠಾಣಕೋಟ್, 2020ರಲ್ಲಿ ಅಹ್ಮದನಗರ, 2020ರಿಂದ 2023ರವರೆಗೆ ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ಸೇರಿ ಒಟ್ಟು 24 ವರ್ಷ ಸೇವೆ ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ ಎಂದರು.

ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ, ಉಪಾಧ್ಯಕ್ಷ ಚಂದ್ರು ಕಲಾಲ್, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಚಯ್ಯ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಸಚಿನ ಗೌಡರ, ನಿವೃತ್ತ ಯೋಧ ಸದಾಶಿವಯ್ಯ ಮಠ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ನಿವೃತ್ತ ಯೋಧನ ತಂದೆ ಚನ್ನಬಸಯ್ಯ ಮಠ, ತಾಯಿ ಪಾರ್ವತಿ, ಪತ್ನಿ ಜ್ಯೋತಿ, ಶ್ರೀಶೈಲಯ್ಯ ಕಲ್ಯಾಣಮಠ, ಲಕ್ಷ್ಮೀ ಕಲ್ಯಾಣಮಠ, ಶಿವು ಕಲ್ಯಾಣಮಠ, ರಾಹುಲ್ ಪಾದಗಟ್ಟಿ, ಸಂತೋಷ ಬಾದರಬಂಡಿ, ರವಿ ವಣಕ್ಯಾಳ, ಸುರೇಶ ಡಮನಾಳ, ಮಹೇಶ ಲಮಾಣಿ, ಬಿ.ಟಿ. ಮ್ಯಾಗೇರಿ, ಸಂತೋಷ ನಡಗೇರಿ, ಚೇತನ್ ತಾಡಪತ್ರಿ, ಸಚಿನ್ ಮೇಲ್ಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net