

ಸಂಡೂರು: ಬಿಎಸ್‌ಎಫ್‌ನಲ್ಲಿ ಯೋಧರಾಗಿ 25 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸುಶೀಲಾನಗರದ ಬಿ.ಮಂಜುನಾಥ ಅವರನ್ನು ಭಾನುವಾರ ಬಿಕೆಜಿ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯರು ಅದ್ದೂರಿ ಸ್ವಾಗತ ಕೋರಿ ಸನ್ಮಾನಿಸಿದರು.
ಬಿಕೆಜಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಬಿ.ರುದ್ರಗೌಡ ಮಾತನಾಡಿ, ಮಂಜುನಾಥ ಅವರು ಜಮ್ಮು, ಶ್ರೀನಗರ, ಅಸ್ಸಾಂ, ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ 25 ವರ್ಷ ದೇಶ ಸೇವೆ ಮಾಡಿ ನಿವೃತ್ತರಾಗಿದ್ದಾರೆ. ಅವರ ಮುಂದಿನ ಜೀವ ಸುಖಕರವಾಗಿರಲಿ ಎಂದು ಶುಭ ಕೋರಿದರು.
ಬಿಕೆಜಿ ಪಾಲುದಾರ ಬಿ.ಕೆ.ಬಸವರಾಜ್ ಗೌಡ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಗ್ರಾಪಂ ಅಧ್ಯಕ್ಷೆ ರಾಧಾಬಾಯಿ ಈಶ್ವರನಾಯ್ಕ, ಉಪಾಧ್ಯಕ್ಷೆ ಈಡಿಗರ ಸುಜಾತಮ್ಮ ಮನೋಹರ್, ಮಂಜುನಾಥ ತಾಯಿ ಜಯಮ್ಮ, ಸೋದರ ರಘುನಾಥ, ಶ್ರೀಕಾಂತ್ ಹಿರೇಮಠ, ಗ್ರಾಪಂ ಸದಸ್ಯರಾದ ಆಂಬರೀಷ್ ನಾಯ್ಕ, ಮಹೇಶ್‌ಗೌಡ, ಆರ್.ಫಕ್ಕೀರಪ್ಪ, ನಾಗರಾಜ್, ಚಂದ್ರಾನಾಯ್ಕ, ಧರ್ಮಾನಾಯ್ಕ, ಪರಶುರಾಮ್, ಶಿವಮೂರ್ತಿ ಸ್ವಾಮಿ ಇತರರಿದ್ದರು.