ನಿವೃತ್ತ ಯೋಧ ತಿಪ್ಪೇಸ್ವಾಮಿ ಅವರಿಗೆ ಸನ್ಮಾನ 4ರಂದು

CTD d.thippeswamy
Published on

ಚಿತ್ರದುರ್ಗ: ಭಾರತೀಯ ಗಡಿಭದ್ರತಾ ಪಡೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗುಡ್ಡದರಂಗವ್ವನಹಳ್ಳಿಯ ಡಿ.ತಿಪ್ಪೇಸ್ವಾಮಿ ಅವರಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೆ.4ರ ಬೆಳಗ್ಗೆ 10.30ಕ್ಕೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.
ಗ್ರಾಮದ ದಿ.ದಾಸಪ್ಪ-ದೊಡ್ಡಕ್ಕ ಪುತ್ರ ಡಿ.ತಿಪ್ಪೇಸ್ವಾಮಿ 2002ರಲ್ಲಿ ಸೇನೆಗೆ ಸೇರಿದ್ದರು. ಜಮ್ಮು-ಕಾಶ್ಮಿರ, ಛತ್ತಿಸ್‌ಘಡ್, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತಿತರೆಡೆ ಸೇವೆ ಸಲ್ಲಿಸಿದ್ದಾರೆ. ಇವರ ಸಹೋದರ ಡಿ.ಜಯಣ್ಣ ಕೂಡ 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್, ಗ್ರಾಪಂ ಅಧ್ಯಕ್ಷೆ ರುದ್ರಮ್ಮ, ಉಪಾಧ್ಯ ಕ್ಷೆ ವಿ.ಟಿ.ರೂಪಾ ಮಂಜುನಾಥ್, ಚಿತ್ರದುರ್ಗ ಅರೆಸೇನಾ ಮಾಜಿ ಯೋಧರ ಸಂಘದ ಅಧ್ಯಕ್ಷ ಲಿಂಗರಾಜು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net