ನಿವೃತ್ತ ಮುಖ್ಯಶಿಕ್ಷಕಿ ಶಶಿಕಲಾಗೆ ಬೀಳ್ಕೊಡುಗೆ

Markal Teacher Shashikala Bilkodige programme photo
Published on

ಬೀದರ್: ಸೇವಾ ನಿವೃತ್ತಿ ಹೊಂದಿದ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಕನ್ನಾ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು.
ಶಾಲೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಅವರ ಸೇವಾ ನಿಷ್ಠೆಯನ್ನು ಪ್ರಶಂಸಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ವಿನಾಯಕ ವಲ್ಲಪೆ, ಶಿವರಾಜ ಬಿರಾದಾರ, ರೈತ ಮುಖಂಡರಾದ ಶಂಕರೆಪ್ಪ ಪಾರಾ,  ಲೋಕೇಶ್ ಬಿರಾದಾರ ಮರಕಲ್, ಪವಾರ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net