ನಿವೃತ್ತ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮೇಗೌಡ ನಿಧನ

ನಿವೃತ್ತ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮೇಗೌಡ ನಿಧನ
Published on

ಹಾಸನ: ಹಾಸನ ನಗರದ ಸಂಗಮೇಶ್ವರ ಎರಡನೆ ಹಂತದ ಶಿವಪಾರ್ವತಿ ದೇವಸ್ಥಾನದ ಬಳಿ ಇರುವ ನಿವೃತ್ತ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮೇಗೌಡ (65) ಅವರು ಬುಧವಾರ ಅವರು ನಿಧನ ಹೊಂದಿದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಇವರ ನಿಧನಕ್ಕೆ ಹಾಸನ ತಾಲೂಕು ಅಖಿಲ ಭಾರತ ಲಿಂಗಾಯತ ಮಹಾಸಭಾದ ವತಿಯಿಂದ ಸಂತಾಪ ಸೂಚಿಸಿದೆ.
ಮೂಲತಃ ಬೇಲೂರು ತಾಲೂಕು ಕಸಬಾ ಹೋಬಳಿ ಮಾಳೆನಹಳ್ಳಿ ಗ್ರಾಮದವರಾದ ರಾಮೇಗೌಡರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಬೇಲೂರು ತಾಲೂಕು ಹಳೇಬೀಡು ಹೋಬಳಿ ಅಕ್ಕಿಹಳ್ಳಿಯಲ್ಲಿರುವ ಅವರ ಜಮಿನಿನಲ್ಲಿ ಬೆಳಿಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net