ನಿವಾಸಿಗಳ ಸಂಕಷ್ಟ ಪರಿಹರಿಸಿ

ctd mp......1
Published on

ಚಿತ್ರದುರ್ಗ:ಚಿತ್ರದುರ್ಗದ 18 ಮತ್ತು 19 ವಾರ್ಡ್‌ಗಳಿಗೆ ಹೊಂದಿಕೊಂಡಿರುವ ವಿಜಯನಗರ ಬಡವಾಣೆಯ 80ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರೀತರಾ ಗುವ ಸಂಭವವಿದ್ದು ಇವರ ಸಂಕಷ್ಟ ತಕ್ಷಣ ಬಗೆಹರಿಸುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅವರು ನಗರಸಭೆ ಆಯುಕ್ತೆ ಎಂ.ರೇಣುಕಾ ಅವರಿಗೆ ಸೂಚಿಸಿದರು. ಸೋಮವಾರ ಸ್ಥಳಕ್ಕೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರೊಂದಿಗೆ ಭೇಟಿ ನೀಡಿದ ಸಂಸದರು ನಿವಾಸಿಗಳ ಮನವಿ ಆಲಿಸಿದರು.

ರಸ್ತೆ ನೆಪದಲ್ಲಿ ನಗರಸಭೆಯಿಂದ 10ರಿಂದ 12 ಅಡಿ ವಿಸ್ತೀರ್ಣದೊಂದಿಗೆ ಮನೆಗಳನ್ನು ಒಡೆದು ಹಾಕಲಾಗಿದೆ. ಇದರಿಂದ 80ಕ್ಕೂ ಹೆ ಚ್ಚು ಕುಟುಂಬಗಳು ಬೀದಿಪಾಲಾಗಿವೆ. ಹಿಂದೆ ಈ ಕುಟುಂಬಗಳಿಗೆ ಎಂ.ಕೆ.ಹಟ್ಟಿ ಗ್ರಾಪಂ ವ್ಯಾಪ್ತಿಯ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಸಮೀಪ ಅಂದಾಜು 2 ಎಕರೆ ಜಾಗದಲ್ಲಿ ಪರ್ಯಾಯ ನಿವೇಶನಗಳನ್ನು ಹಂಚಲಾಗಿತ್ತು. ಆದರೆ ಹಕ್ಕು ಪತ್ರ ವಿತರಿಸಲೇ ಇ ಲ್ಲ.ಗ್ರಾಪಂ ಜಾಗ ತಮ್ಮದೆಂದು ಹೇಳಿದ್ದರಿಂದ ಹಕ್ಕು ಪತ್ರ ಸಿಗದಂತಾಗಿ ತ್ರಿಶಂಕು ಸ್ಥಿತಿಯಲ್ಲಿ ಇದ್ದೇವೆ ಎಂದು ನಿವಾಸಿಗಳು ತಮ್ಮ ನೋವ ನ್ನು ವ್ಯಕ್ತಪಡಿಸಿದರು.

ದಲಿತರು ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಿರುವ ಈ ಪ್ರದೇಶದಲ್ಲಿ ಏಕಾಏಕಿ ಮನೆಗಳನ್ನು ಒಡೆದುಹಾಕಿರುವುದು ಖಂಡನೀ ಯ. ಕೂಡಲೇ ನಿವಾಸಿಗಳ ಮನೆಗಳನ್ನು ಸರಿಪಡಿಸಿ ಅಥವಾ ಹಂಚಿಕೆ ಮಾಡಿದ್ದ ನಿವೇಶನಗಳ ಹಕ್ಕುಪತ್ರಗಳನ್ನು ಕೊಡಿಸಿ ಎಂದು ತಾಕೀತು ಮಾಡಿದರು. 20 ದಿನಗಳ ಒಳಗೆ ಆಗಿರುವ ಲೋಪ ಸರಿಪಡಿಸುವುದಾಗಿ ಆಯ್ತುಕರು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ,ಖ ಜಾಂಚಿ ಮಾಧುರಿಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net