ನಿಲ್ಲದ ವಾಹನ ಸಂಚಾರ

26 vikram 1A
Published on

ಧಾರವಾಡ: ಇಡೀ ದಿನ ಲಾಕ್​ಡೌನ್ ಘೊಷಣೆ ಮಾಡಿದ್ದರೂ ನಗರದಲ್ಲಿ ವಾಹನಗಳ ಸಂಚಾರ ಮಾತ್ರ ಪೂರ್ಣ ಪ್ರಮಾಣದಲ್ಲಿ ಸ್ಥಗಿತವಾಗಿರಲಿಲ್ಲ.

ಕಳೆದ ಮೂರು ವಾರದ ಸಂಡೇ ಲಾಕ್​ಡೌನ್​ಗೆ ಜನರಿಂದ ಉತ್ತಮ ಬೆಂಬಲ ಸಿಕ್ಕ ಹಿನ್ನೆಲೆಯಲ್ಲಿ ನಗರದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ, ಈ ಭಾನುವಾರ ಮಾತ್ರ ಕೆಲ ಬಡಾವಣೆ, ಪ್ರಮುಖ ರಸ್ತೆಗಳಲ್ಲಿ ಬೈಕ್, ಕಾರುಗಳ ಸಂಚಾರ ಕಂಡು ಬಂದಿತು. ಆದರೆ, ಜನರ ಓಡಾಟ ಮಾತ್ರ ವಿರಳವಾಗಿತ್ತು. ಕೆಲ ಕಡೆಗಳಲ್ಲಿ ಪೊಲೀಸರು ಅನಗತ್ಯವಾಗಿ ತಿರುಗಾಡುವವರನ್ನು ತಡೆದು ಬಿಸಿ ಮುಟ್ಟಿಸಿದರು.

ಸೂಪರ್ ಮಾರುಕಟ್ಟೆ, ಸುಭಾಷ್ ರಸ್ತೆ, ಜುಬಿಲಿ ವೃತ್ತ, ನೆಹರು ಮಾರುಕಟ್ಟೆ ಸೇರಿ ಎಲ್ಲ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಅಂಗಡಿಗಳು ಮುಚ್ಚಿದ್ದವು. ಹೀಗಾಗಿ ಸದಾ ಜನರಿಂದ ಕೂಡಿರುತ್ತಿದ್ದ ಮಾರುಕಟ್ಟೆ ಪ್ರದೇಶ ಖಾಲಿ ಖಾಲಿಯಾಗಿತ್ತು.

ಹಳೇ ಬಸ್ ನಿಲ್ದಾಣ, ಬಿಆರ್​ಟಿಎಸ್ ನಿಲ್ದಾಣ, ಹೊಸ ಬಸ್ ನಿಲ್ದಾಣಗಳು ಬಸ್ ಹಾಗೂ ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದವು. ಕೆಲ ಕಡೆಗಳಲ್ಲಿ ಸಂಚಾರ ನಡೆಸಿದ್ದ ಪೊಲೀಸರು, ಜನರ ಓಡಾಟ ಹಾಗೂ ವಾಹನಗಳ ಸಂಚಾರ ಕಂಡುಬಂದ ಸಂದರ್ಭದಲ್ಲಿ ಅವರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದರು. ಆರೋಗ್ಯದ ದೃಷ್ಟಿಯಿಂದ ಈ ನಿಯಮ ಜಾರಿಗೆ ತರಲಾಗಿದೆ. ಹೀಗಾಗಿ ಸರ್ಕಾರ ನೀಡುವ ಆದೇಶಗಳನ್ನು ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಸಂದೇಶ ನೀಡುವುದು ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net