ನಿಲ್ದಾಣವಿದ್ದರೂ ಬಸ್​ ನಿಲ್ಲೋದಿಲ್ಲ!

13 04
Published on

ಪ್ರಯಾಣಿಕರ ಕಷ್ಟ ಕೇಳೋರ್ಯಾರು?, ಗೃಹಸಚಿವರ ಕ್ಷೇತ್ರದಲ್ಲಿ ಸಾರ್ವಜನಿಕರು ಹೈರಾಣ

ರಾಘವೇಂದ್ರ ದಾಸರಹಳ್ಳಿ ಕೊರಟಗೆರೆ

ಪಟ್ಟಣದಲ್ಲಿ ಬಸ್​ ನಿಲ್ದಾಣ ಇರುವೆಡೆ ಕೆಎಸ್​ಆರ್​ಟಿಸಿ ಬಸ್​ಗಳು ನಿಲ್ಲದೆ, ನಿಲ್ದಾಣವಿಲ್ಲದ ಕಡೆ ನಿಂತು ಹೋಗುತ್ತಿರುವುದರಿಂದ ಪ್ರಯಾಣಿಕರು ಪಡಿಪಾಟಲು ಪಡುವಂತಾಗಿದೆ. ಕೆಲ ವರ್ಷಗಳ ಹಿಂದೆ 5 ಲಕ್ಷ ರೂ. ವೆಚ್ಚದಲ್ಲಿ ಬಸ್​ ತಂಗುದಾಣ ನಿಮಾರ್ಣಗೊಂಡಿದೆ. ಆದರೆ, ಬಸ್​ಗಳು ನಿಲ್ದಾಣದಲ್ಲಿ ನಿಲುಗಡೆಯಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿರುವವರು ಸಾರಿಗೆ ಇಲಾಖೆ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕಿದೆ. ಜನಪರ ಆಡಳಿತದ ಮೌಲ್ಯಗಳು ಉಳಿಯಬೇಕಾದರೆ, ಸಾರ್ವಜನಿಕ ಹಿತಾಸಕ್ತಿಯನ್ನು ಪೋಷಿಸಲು ಕಟ್ಟಿರುವ ತಂಗುದಾಣಗಳ ಬದ್ಧವಾದ ಉಪಯೋಗದ ಕುರಿತು ಶಿಫಾರಸು ಹೊರಡಿಸಿ ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಬೇಕಿದೆ.

ಸರ್ಕಾರದ ಹಣ ದುರ್ಬಳಕೆಯೇ?: ಐದು ಲಕ್ಷ ರೂ. ವೆಚ್ಚದ ತಂಗುದಾಣಕ್ಕೆ ಸರ್ಕಾರದ ಅನುದಾನ, ಯೋಜನೆ, ಇಲಾಖೆಗಳಿಂದ ಅನುಮೋದನೆ ಎಂಬ ಎಲ್ಲ ಪ್ರಕ್ರಿಯೆಗಳ ಮೂಲಕ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಅದರ ಉಪಯೋಗ ಶೂನ್ಯವಾಗಿದೆ ಎಂದರೆ ಇದು ಸಾರ್ವಜನಿಕ ಹಣದ ದುರ್ಬಳಕೆ ಅಲ್ಲವೇ? ಈ ನಿಲ್ದಾಣ ಸಾರ್ವಜನಿಕರಿಗೆ ಅನುಕೂಲವಿಲ್ಲದಿದ್ದರೆ ಯಾರಿಗಾಗಿ ಎಂಬ ಪ್ರಶ್ನೆ ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರ ಕ್ಷೇತ್ರದಲ್ಲಿ ಸೇವಾ ದೌರ್ಬಲ್ಯ ಕಾಣಿಸುವುದು ಅವರ ಶ್ರದ್ಧೆಗೆ ಧಕ್ಕೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಆಟೋ ಹಿಡ್ಕೊಂಡು ಹೋಗ್ರಿ: ವೃದ್ಧರು, ಗರ್ಭಿಣಿಯರು, ಅಂಗವಿಕಲರು ಮತ್ತು ಮಕ್ಕಳು ನಿಲ್ದಾಣದಲ್ಲೇ ನಿಂತು ಕಾಯುತ್ತಿದ್ದರೂ, ನಿರ್ವಾಹಕರ ರ್ನಿಲಕ್ಷ್ಯದಿಂದ ಮುಂದೆ ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ. ಸಾರ್ವಜನಿಕರು ನಿರ್ವಾಹಕರನ್ನು ಕೇಳುವಂತೆಯೇ ಇಲ್ಲ. ನೀವು ಹೇಳಿದಂತೆ ಎಲ್ಲೆಲ್ಲೂ ನಿಲ್ಲಿಸೋಕೆೆ ಆಗಲ್ಲ, ಬೇಕಿದ್ರೆ ಆಟೋ ಹಿಡ್ಕೊಂಡು ಹೋಗಿ, ಇಲ್ಲ ಅಂದ್ರೆ ನಡ್ಕೊಂಡು ಹೋಗ್ರಿ ಎಂದು ಉಡಾೆ ಉತ್ತರ ನೀಡುತ್ತಾರೆ ಎಂಬುದು ಪ್ರಯಾಣಿಕರ ದೂರಾಗಿದೆ.

ಪ್ರಯಾಣಿಕರು ತಂಗುದಾಣದಲ್ಲಿ ಕಾಯುತ್ತಿರುವಾಗ ಬಸ್​ಗಳು ನಿಲ್ಲದೆ ಸಾಗುತ್ತವೆ. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಅಂಗವಿಕಲರಿಗೆ ನಿತ್ಯ ಸಂಕಷ್ಟ ಎದುರಾಗುತ್ತಿದೆ. ಕೆಲವರು ದುಬಾರಿ ಹಣ ತೆತ್ತು ಆಟೋ ಹಿಡಿದು ತೆರಳಬೇಕಾದ ಸ್ಥಿತಿ ಇದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.| ಕೆ.ಎಸ್​ ರವಿಕುಮಾರ್​ ಪಟ್ಟಣ ವಾಸಿಪೂರ್ವ ನಿಶ್ಚಯ ನಿಲ್ದಾಣದಲ್ಲಿ ಬದಲಾವಣೆ ಮಾಡಿಲ್ಲ. ಪ್ರಯಾಣಿಕರ ಸೇವೆಗಾಗಿ ನಾವು ಇರುವುದು. ಪ್ರಯಾಣಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವುದು ನಮ್ಮ ಚಾಲಕ ಮತ್ತು ನಿರ್ವಾಹಕರ ಕರ್ತವ್ಯ. ನಿಲುಗಡೆ ಮಾಡದೆ ಇರುವ ಬಸ್​ ನಂಬರ್​ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಅದೇ ರೀತಿ ಈಗ ಎಲ್ಲ ಬಸ್​ಗಳು ಅಶ್ವತ್ಥಕಟ್ಟೆ ನಿಲ್ದಾಣ (ಮಧ್ಯೆ ಬಸ್​ ನಿಲ್ದಾಣದಲ್ಲಿ) ನಿಲ್ಲಿಸುವಂತೆ ಮೌಖಿಕವಾಗಿ ಸೂಚನೆ ನೀಡುತ್ತೇನೆ. | ಚಂದ್ರಶೇಖರ್​ಡಿಸಿ, ಕೆಎಸ್​ಆರ್​ಟಿಸಿ, ತುಮಕೂರುಸಾರ್ವಜನಿಕ ಸಾರಿಗೆ ಸೇವೆಯು ಜನಸೇವೆಗಾಗಿ ಎಂಬ ಮೌಲ್ಯ ಮರೆತರೆ ಹಣ, ಯೋಜನೆ, ಕಟ್ಟಡ ಎಲ್ಲವೂ ವ್ಯರ್ಥ. ಈ ರ್ನಿಲಕ್ಷ್ಯತೆಗೆ ಚಿಕಿತ್ಸೆ ನೀಡುವ ಸಮಯವಾಗಿದೆ. ಕೊರಟಗೆರೆಯ ಸಾರಿಗೆ ವ್ಯವಸ್ಥೆ ಸರಿಪಡಿಸಬೇಕಿದೆ. | ಜಯರಾಂ ಕೊರಟಗೆರೆ ಪಟ್ಟಣದ ವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net