ನಿಲಸೋಗೆಯಲ್ಲಿ ಬಸವ ಜಯಂತಿ ಆಚರಣೆ

28 may tnp 02
Published on

ತಿ.ನರಸೀಪುರ: ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಸೋಮವಾರ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.

ಶ್ರೀ ಗುರು ಮಲ್ಲೇಶ್ವರ ವೀರಶೈವ ಬಳಗ, ಶ್ರೀ ಬಸವೇಶ್ವರ ಯುವಕರ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಾರ್ವಜನಿಕರಿಗೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು.

ನಿಲಸೋಗೆ ಮಠದ ಶ್ರೀ ಮಲ್ಲಪ್ಪ ಸ್ವಾಮೀಜಿ, ಬಿಲಿಗೆರೆಹುಂಡಿ ಮಠದ ಶ್ರೀ ಗುರುಸ್ವಾಮೀಜಿ, ಹೊಸೂರುಹುಂಡಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ಕುಂದೂರು ಮಠದ ಶ್ರೀ ನಂಜುಂಡೇಶ್ವರ ಸ್ವಾಮೀಜಿ, ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಕೋಶಾಧ್ಯಕ್ಷ ದೊಡ್ಡನಹುಂಡಿ ನಂಜುಂಡಸ್ವಾಮಿ, ಮುಖಂಡರಾದ ಶೇಖರಪ್ಪ, ನಂಜುಂಡಸ್ವಾಮಿ, ಪರಮೇಶ್ ಪಟೇಲ್, ಬಿ.ಎಂ.ಶಿವಮಲ್ಲಪ್ಪ, ಬಿ.ಎಸ್.ಸುಗಂಧರಾಜು, ಹಿರಿಯೂರು ನವೀನ್, ಎಸ್.ಕೆ. ಕಿರಣ್, ಡಿ.ಎಲ್.ಮಹದೇವಪ್ಪ, ಕಿರಗಸೂರು ಮಹದೇವಸ್ವಾಮಿ, ತೋಂಟೇಶ್, ಮಂಜುನಾಥ್, ಮಲ್ಲಪ್ಪ, ಮೂಗೂರು ಕುಮಾರಸ್ವಾಮಿ, ಕುಮಾರ್, ಮಹದೇವಸ್ವಾಮಿ, ಕುಮಾರ್, ಜಿ.ಎಲ್.ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net