ನಿರ್ಲಕ್ಷೃದ ವಿರುದ್ಧ ಎಫ್‌ಐಆರ್ ದಾಖಲು ಎಚ್ಚರಿಕೆ

CTD----00003
Published on

ಚಿತ್ರದುರ್ಗ: ತ್ಯಾಜ್ಯ ನೀರು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಬೇಜವಾಬ್ದಾರಿತನ,ಸಾರ್ವಜನಿಕರಿಗೆ ತೊಂದರೆ ನೀಡಿದ ಕಾರಣಕ್ಕಾಗಿ ಎಫ್‌ಐಆರ್ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಾಮ ಗಾರಿಗಳ ಕುರಿತಂತೆ ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಸಲಹಾ ಮತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವ ರು,ಮಂಡಳಿಯಿಂದ ನಗರದ ಒಳಚರಂಡಿ ಜಾಲದ ಮಾರ್ಗ ನಕ್ಷೆ ಸಿದ್ಧಪಡಿಸಬೇಕು. ವೆಟ್‌ವಲ್ಗಳ ಸಾಮರ್ಥ್ಯಕ್ಕೆ ತಕ್ಕಂತೆ ನಗರದ ಕ ಲುಷಿತ ನೀರು ಸೇರದೆ ರಸ್ತೆಗಳ ಮೇಲೆ,ಕೊಳಚೆ ನೀರು ಹರಿಯುತ್ತಿರುವುದು,ಮನೆಗಳಿಗೆ ನುಗ್ಗುತ್ತಿರುವುದು ಸಾರ್ವಜನಿಕರ ಸ್ವಾಸ್ಥ್ಯಕ್ಕೆ ಕಂಟಕವಾಗುತ್ತದೆ. ವೆಟ್‌ವೆಲ್ ನಿರ್ಮಾಣ ವೇಳೆ ತ್ಯಾಜ್ಯ ನೀರು ಸೇರುವಂತೆ ಸಂಪರ್ಕ ಜಾಲ ಅಭಿವೃದ್ಧಿಯಾಗ ಬೇಕಿತ್ತು. ಆದರೆ ನಗರ ಸಭೆ ಹಾಗೂ ಮಂಡಳಿ ಸಮನ್ವಯತೆ ಕೊರತೆಯಿಂದ ವೆಟ್‌ವೆಲ್ ಹಾಗೂ ತ್ಯಾಜ್ಯನೀರು ಶುದ್ಧೀಕರಣ ಘಟಕಗಳಿಗೆ ಕೊಳಚೆ ನೀರು ಸೇರುತ್ತಿಲ್ಲ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜಕಾಲುವೆ,ಇತರೆ ಕಾಲುವೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಬಫರ್ ಜೋನ್ ಗುರುತಿಸಿ,ಇಲ್ಲಿ ಕಟ್ಟಡಗಳಿಗೆ ಅನುಮತಿ ಬೇಡ. ಅನು ಮತಿ ನೀಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದರು. ಅಮೃತ್ ಯೋಜನೆಯಡಿ,ಮೊಳಕಾಲ್ಮೂ ರು,ನಾಯಕನಹಟ್ಟಿ,ಹೊಳಲ್ಕೆರೆಯಲ್ಲಿ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಿಸಲು ಸ್ಥಳ ಗುರುತಿಸಿ ಮಂಡಳಿಗೆ ಹಸ್ತಾತರಿಸಬೇಕೆಂದರು.
ನಗರದ ಮಲ್ಲಾಪುರ ಕೆರೆ ದಂಡೆ ಮರು ಸಮೀಕ್ಷೆಗೆ ಡಿಸಿ ಸೂಚಿಸಿದರು. ಕುಡಿಯುವ ನೀರು ಸರಬಾರಾಜು ಕಾಮಗಾರಿಗಳ ಅನುಮತಿಗಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳ ಸಭೆಯನ್ನು ಶುಕ್ರವಾರ ಪ್ರತ್ಯೇಕವಾಗಿ ಕರೆಯುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತಾರಘು,ಆಯುಕ್ತೆ ಎಂ.ರೇಣುಕಾ,ನಾಯಕನಹಟ್ಟಿ ಪಪಂ ಅಧ್ಯಕ್ಷೆ ಟಿ.ಮಂಜುಳ ಶ್ರೀಕಾಂತ,ಜಿಲ್ಲಾ ನಗರಾ ಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ.ಮಹೇಂದ್ರ ಕುಮಾರ್,ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ಅನಿಲ್‌ಕುಮಾರ್,ಎಇಇ ಹೇಮಂತಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net