ನಿರ್ಮಾಣ ಭಾರತಿ ಹೊಸ ಶಾಖೆ ಆರಂಭ

Nirman Bharati Photo-2
Published on

ಬೀದರ್: ಇಲ್ಲಿಯ ನಿರ್ಮಾಣ ಭಾರತಿ ವಿವಿಧೊದ್ದೇಶ ಸಹಕಾರ ಸಂಘ ನಿಯಮಿತವು ಜಿಲ್ಲೆಯಲ್ಲಿ ಇನ್ನೂ ಎರಡು ಹೊಸ ಶಾಖೆ ಶುರು ಮಾಡಿದೆ. ಬಸವಕಲ್ಯಾಣ ಹಾಗೂ ಚಿಟಗುಪ್ಪ ಶಾಖೆಗಳ ಆರಂಭದೊಂದಿಗೆ ಸಂಘದ ಒಟ್ಟು ಶಾಖೆಗಳ ಸಂಖ್ಯೆ ಏಳಕ್ಕೆ ಏರಿದೆ. ಬಸವಕಲ್ಯಾಣದಲ್ಲಿ ಏರ್ಪಡಿಸಿದ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮೀ ಮಠ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಶಾಖೆ ಪ್ರಾರಂಭಿಸಲಾಗಿದೆ. ಸಂಘವು ಬೀದರ್ ನಗರದಲ್ಲಿ ಎರಡು, ಬಸವಕಲ್ಯಾಣ ಮೂರು, ಕಮಠಾಣ ಹಾಗೂ ಚಿಟಗುಪ್ಪ ಪಟ್ಟಣದಲ್ಲಿ ತಲಾ ಒಂದು ಶಾಖೆ ಹೊಂದಿದೆ. ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕರ ಸಹಕಾರದಿಂದಾಗಿ 15 ವರ್ಷಗಳ ಅವಧಿಯಲ್ಲಿ ಸಂಘ ಗಣನೀಯ ಸಾಧನೆ ಮಾಡಿದೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ನಹೀದಾ ಸುಲ್ತಾನಾ ಉದ್ಘಾಟಿಸಿದರು. ಆಯುಕ್ತ ಗೌತಮ ಕಾಂಬ್ಳೆ, ಬಲಭೀಮ ಕಾಂಬಳೆ, ಬಸವರಾಜ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net