

ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಮೀನು ಮಾರಾಟ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಗಂಗಾಮತಸ್ಥರ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ.ಕುಮಾರ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ, ತಾಲೂಕು ಆಡಳಿತ ಹಾಗೂ ಗಂಗಾಮತಸ್ಥರ ಸಂಘದಿಂದ ಅಭಿನಂದಿಸಲಾಯಿತು.
ಕರ್ನಾಟಕ ರಾಜ್ಯ ಮೀನು ಮಾರಾಟ ಮಹಾಮಂಡಳದ ವಿಭಾಗ ಮಟ್ಟದ ಕಚೇರಿ ಮೈಸೂರಿನಲ್ಲಿದ್ದು, ಹಾಸನ ಜಿಲ್ಲೆಯನ್ನು ಪ್ರತಿನಿಧಿಸುವ ನಿರ್ದೇಶಕ ಸ್ಥಾನಕ್ಕೆ ಚನ್ನರಾಯಪಟ್ಟಣ ತಾಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಸಿ.ಜಿ.ಕುಮಾರ್ ಸ್ಪರ್ಧಿಸಿದ್ದರು. ಜನವರಿ 16ರಂದು ನಡೆದ ಚುನಾವಣೆಯಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ 119 ಮತ ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಚರಿಸಲಾದ ಶಿವಶರಣ ಅಂಬಿಗ ಚೌಡಯ್ಯ ಅವರ ಜಯಂತೋತ್ಸವದ ವೇಳೆ ಅಭಿನಂದಿಸಲಾಯಿತು.
ಶಾಸಕ ಸಿ.ಎನ್.ಬಾಲಕೃಷ್ಣ. ತಹಸೀಲ್ದಾರ್ ವಿ.ಎಸ್.ನವೀನ್‌ಕುಮಾರ್, ಗಂಗಾಮತಸ್ಥರ ಸಂಘದ ತಾಲೂಕು ಉಪಾಧ್ಯಕ್ಷ ಬೋರಣ್ಣ, ಕಾರ್ಯದರ್ಶಿ ವೆಂಕಟೇಶ್ ಬಾಗೂರು, ನಿರ್ದೇಶಕರಾದ ಮಂಜುನಾಥ್, ನಿಂಗಪ್ಪ, ಶ್ರವಣೇರಿ, ಲೋಕೇಶ್, ಸಿ.ಟಿ.ಕುಮಾರ್, ಮುಖಂಡರಾದ ಗೋವಿಂದಪ್ಪ ಬಾಗೂರು, ಲೋಕೇಶ್ ಹಿರೀಸಾವೆ, ಪಿಎಲ್‌ಡಿ ಬ್ಯಾಂಕ್ ರಾಜಣ್ಣ, ನಂದೀಶ್ ಆನೇಕೆರೆ, ರಮೇಶ್ ಜಂಬೂರು, ಸುರೇಶ್, ಮೋಹನ್ ಸಂತೆಶಿವರ ಮತ್ತಿತರರು ಇದ್ದರು.