ನಿರ್ಗುಣ ಪಾದುಕೆ ಹೆಸರಲ್ಲಿ ವಂಚನೆ

1801 dvg 01 a
Published on

ದೇವಲಗಾಣಗಾಪುರ: ದೇವಲಗಾಣಗಾಪುರದ ಶ್ರೀ ಗುರುದೇವ ದತ್ತಾತ್ರೇಯ ದೇವಸ್ಥಾನದಲ್ಲಿರುವ ಶ್ರೀ ನರಸಿಂಹ ಸರಸ್ವತಿ ನಿರ್ಗುಣ ಮಠದ ನಿರ್ಗುಣ ಪಾದುಕೆಗಳ ನಕಲು ಮಾಡಿ, ಭಕ್ತರನ್ನು ವಂಚಿಸಲಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಅರ್ಚಕರು, ಪೂಜಾರಿಗಳು, ಭಕ್ತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ದೇವಲಗಾಣಗಾಪುರ ಠಾಣೆಗೆ ದೂರು ನೀಡಿರುವ ಅವರು, ನಿರ್ಗುಣ ಪಾದುಕೆಗಳನ್ನು ಯಾವುದೇ ಕಾರಣಕ್ಕೂ ದೇವಸ್ಥಾನದಿಂದ ಹೊರಗೆ ತೆಗೆದುಕೊಂಡು ಬರುವುದಿಲ್ಲ. ಆದರೆ ಕೆಲವರು ಈ ಬಗ್ಗೆ ಸುಳ್ಳು ಸೃಷ್ಟಿಸಿ, ಪಾದುಕೆಗಳನ್ನು ರಚಿಸಿ ಭಕ್ತರನ್ನು ವಂಚಿಸುತ್ತಿದ್ದಾರೆ. ಪ್ರತಿ ಪೂಜೆಗೆ 50, ಲಕ್ಷ ರೂ. ಪಡೆಯುತ್ತಿದ್ದಾರೆ. ಇದು ಭಕ್ತರ ನಂಬಿಕೆ ಮೇಲೆ ಮೋಸ ಮಾಡಿದಂತಾಗುತ್ತಿದೆ ಎಂದು ಎಂದು ದೂರು ನೀಡಿದ್ದಾರೆ.
700 ವರ್ಷಗಳ ಇತಿಹಾಸ ಇರುವ ದತ್ತಾತ್ರೇಯ ಮಠಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ಭಕ್ತರ ನಂಬಿಕೆಗಳೊಂದಿಗೆ ಆಟವಾಡುತ್ತಿರುವ ಕೆಲವರು ನಕಲಿ ನಿರ್ಗುಣ ಪಾದುಕೆಗಳನ್ನು ತಯಾರಿಸಿ, ಮಹಾರಾಷ್ಟ್ರದ ಹಲವರ ಮನೆಯಲ್ಲಿ ವಿಶೇಷ ಪೂಜೆ ಮಾಡಿರುವ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಭಕ್ತರನ್ನು ಆಹ್ವಾನಿಸಿ, ಪೂಜೆಗೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದು ಅಪರಾಧವಾಗಿದ್ದು, ಈ ಕಾರ್ಯವನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ದೇವಸ್ಥಾನ ಕಾರ್ಯದರ್ಶಿ ಧನಂಜಯ ಪೂಜಾರಿ, ತಾಪಂ ಸದಸ್ಯ ಬಲವಂತ ಜಕ್ಬಾ, ಬಾಲಕೃಷ್ಣ ಪೂಜಾರಿ, ಪ್ರಿಯಾಂಕ್ ಪೂಜಾರಿ, ಹೃಷಿಕೇಷ ಪೂಜಾರಿ, ಗುಂಡಪ್ಪ ಹೊಸಮನಿ, ರಾಮ ಪಟ್ಟೇದ, ಸಂತೋಷ ವಡಗೇರಿ, ಶ್ರೀಪಾದ ಮಾಳಗೆ, ಭಾಗಪ್ಪ ಮೈನಾಳೆ, ಮಲ್ಲಿಕಾಜರ್ುನ ರಾಜು ಸೆಬಸಗಿ, ಪುಟ್ಟು ಗೌಡ, ದತ್ತು ಗೌಡ, ಸವರ್ೇಶ ಪೂಜಾರಿ ಸೇರಿ ಗ್ರಾಮಸ್ಥರು, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net