ನಿರ್ಗತಿಕರ ಸೇವೆ ಮಾಡುತ್ತಿರುವ ಧರ್ಮಸ್ಥಳ

12AFZ 01
ಅಫಜಲಪುರದÀಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನಿಂದ ವಿದ್ಯಾರ್ಥಿಗಳಿಗೆ ಸುe್ಞÁನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರಗಳನ್ನು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ವಿತರಿಸಿದರು.ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಮಳೇಂದ್ರ ಡಾಂಗೆ,ಮಹಾAತೇಶ, ಸಂಗ್ರಾಮಗೌಡ,ಶೈಲೇಶ ಗುಣಾರಿ ಇದ್ದರು.
Published on

ಅಫಜಲಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರಂತರವಾಗಿ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಬಡ, ನಿರ್ಗತಿಕರ ಸೇವೆ ಮಾಡುವುದರ ಜತೆಗೆ ಅನುವು ಮಾಡಿಕೊಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ.ಎಂ.ವೈ.ಪಾಟೀಲ್ ಹೇಳಿದರು.

ಪಟ್ಟಣದ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ `ಸುe್ಞÁನ ನಿಧಿ ಶಿಷ್ಯವೇತನ' ಮಂಜೂರಾತಿ ಪತ್ರಗಳನ್ನು ಮಂಗಳವಾರ ವಿತರಿಸಿ ಮಾತನಾಡಿ, ಸಮಾಜದಲ್ಲಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಶಿಷ್ಯವೇತನ ನೀಡುತ್ತಿರುವುದರಿಂದ ಉನ್ನತ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದರು.

ಪಿಡುಗಾಗಿ ಸಮಾಜಕ್ಕೆ ಕಾಡುತ್ತಿರುವ ಕುಡಿತದ ಚಟ ಬಿಡಿಸಲು ಮದ್ಯವರ್ಜನ ಶಿಬಿರ ನಡೆಸುವ ಮೂಲಕ ಸಾವಿರಾರು ಕುಟುಂಬಗಳನ್ನು ರಕ್ಷಣೆ ಮಾಡುತ್ತಿರುವುದನ್ನು ಹಾಗೂ ಧರ್ಮಸ್ಥಳದ ತ್ರಿವಿಧ ದಾಸೋಹ ಕಾರ್ಯವನ್ನು ಶ್ಲಾಘಿಸಿದರು.

ತಾಲೂಕಾ ಯೋಜನಾಧಿಕಾರಿ ಮಹಾಂತೇಶ ಮಾತನಾಡಿ, ತಾಲೂಕಿನಲ್ಲಿ ೩೭ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದು, ಮಂಜೂರಾತಿ ಪತ್ರ ನೀಡಲಾಗಿದೆ. ನಿರ್ಗತಿಕರಿಗೆ ಮಾಸಾಶನ ನೀಡುವುದು, ಕೆರೆ ಹೂಳೆತ್ತುವುದು,ಸ್ವ-ಉದ್ಯೋಗಕ್ಕೆ ತರಬೇತಿ, ನಿರ್ಗತಿಕರಿಗೆ ವಾತ್ಸಲ್ಯ ಮನೆ ನಿರ್ಮಾಣ ಮೊದಲಾದ ಕಾರ್ಯಗಳ ಮೂಲಕ ಸಂಘ ಅಸಹಾಯಕರಿಗೆ ಶಕ್ತಿಯಾಗಿ ನಿಂತಿದೆ ಎಂದು ತಿಳಿಸಿದರು.

ಪೂಜ್ಯ ಡಾ.ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸನ್ನಿಧಾನ ವಹಿಸಿದ್ದರು. ಕೃಷಿಕ ಸಮಾಜ ತಾಲೂಕಾಧ್ಯP್ಷÀ ಮಳೆಂದ್ರ ಡಾಂಗೆ, ಪ್ರಮುಖರಾದ ಸಂಗ್ರಾಮಗೌಡ ಪಾಟೀಲ, ಶೈಲೇಶ ಗುಣಾರಿ, ಪ್ರಭಾವತಿ ಮೇತ್ರಿ, ಅಪ್ಪಾಶಾ ರಾಂಪುರ, ಚಿನ್ನುಸಾಬï ಮನಿಯರ, ಬಸಯ್ಯ ನಂದಿಕೋಲ, ರಾಹುಲ, ರಾಚಪ್ಪ, ಪಾರ್ವತಿ, ಪ್ರತಿಭಾ ಮಹೇಂದ್ರಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net