ನಿರುದ್ಯೋಗಿ ಯುವಕರಿಗೆ ಉದ್ಯೋಗ

ydg05
Published on

ಗುರುಮಠಕಲ್: ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕುಡಿಯುವ ನೀರು ಒದಗಿಸುವುದರ ಜತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಇರಾದೆ ಹೊಂದಲಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದ ಗುರುಕುಲ ರೂರಲ್ ಡೆವಲ್‌ಮೆಂಟ್ ಮತ್ತು ಶಿಕ್ಷಣ ಸಂಸ್ಥೆಯ ಎಸ್.ವಿ. ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ವಾರದ ಹಿಂದೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಕಡೆಚೂರ ಬಳಿಯ ರೈಲ್ವೆ ಕೋಚ್ ಕಾರ್ಖಾನೆ ಪರಿಶೀಲಿಸಿದ್ದಾರೆ. ರೈಲ್ವೆ ಕೋಚ್ ತಯಾರಿಕೆ ಘಟಕದಲ್ಲಿ ೨೦೦೦ಕ್ಕಿಂತ ಹೆಚ್ಚು ಯುವಕರಿಗೆ ಉದ್ಯೋಗ ಲಭಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ನಮ್ಮ ಕ್ಷೇತ್ರಕ್ಕೆ ವರದಾನವಾಗಲಿದ್ದು, ಇದರಿಂದ ಕ್ಷೇತ್ರದ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಲಭಿಸಲಿದ್ದು, ಗುಳೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಇದು ನನ್ನ ಸಂಕಲ್ಪವಾಗಿದೆ ಎಂದು ಭರವಸೆ ನೀಡಿದರು.

ಕ್ಷೇತ್ರದ ಯುವಕರು ಪದವಿ ಜತೆಗೆ ಕೌಶಲ ಪ್ರವೀಣತೆ ಪಡೆಯುವಂತೆ ಪ್ರೋತ್ಸಾಹಿಸಲು ಯುವಕರಿಗಾಗಿ ಕೌಶಲ ತರಬೇತಿ ಆರಂಭಿಸಲಾಗುತ್ತಿದೆ. ಇದರಿಂದ ಸ್ವಯಂ ಉದ್ಯೋಗ ಮಾಡಲು ಸಶಕ್ತರಾಗುವುದರ ಜತೆಗೆ ಸ್ವಾವಲಂಬನೆ ಬದುಕು ನಡೆಸಲು ಸಾಧ್ಯವಾಗಲಿದೆ ಎಂದರು.

ಈ ವೇಳೆ ಖಾಸಾ ಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಕರ‍್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ರಘುನಾಥರೆಡ್ಡಿ ನಜಾರಪುರ, ಸಂಸ್ಥೆ ಖಜಾಂಚಿ ಜ್ಞಾನೇಶ್ವರರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಪಿಐ ದೇವಿಂದ್ರಪ್ಪ ದೋಳಖೇಡ, ನಾರಾಯಣ ಸಾಕಾ, ಅಜೇಯರೆಡ್ಡಿ ಯಲ್ಹೇರಿ, ಶರಣು ಅವುಂಟಿ, ಪಾಪಣ್ಣ ಮನ್ನೆ, ಪ್ರಕಾಶ ನಿರೇಟಿ, ಬಸಣ್ಣ ದೇವರಹಳ್ಳಿ, ನಾಗನಾಥರೆಡ್ಡಿ ಯಲ್ಹೇರಿ, ಪ್ರಾಚಾರ್ಯ ನರಸಿಂಹಲು ಕಾನಾಗಡ್ಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net