ನಿರುದ್ಯೋಗ ಭತ್ಯೆ ಗ್ಯಾರಂಟಿಗೆ ಷರತ್ತು

CTD 26 STRIKE-05
Published on


ಚಿತ್ರದುರ್ಗ: ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ನಿಗದಿತ ವಯೋಮಿತಿಯೊಳಗಿನ ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ಕೊಡಬೇಕೆಂದು ಆಗ್ರಹಿಸಿ ಆ ಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ)ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟಿಸಲಾಯಿತು.
ಪದವಿ,ಡಿಪ್ಲೊಮಾ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯಡಿ 2012-23ನೇಸಾಲಿನಲ್ಲಿ ಉತ್ತೀರ್ಣರಾದವರಿಗೆ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ನೀಡು ನಿಬಂಧನೆ ಸರಿಯಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವವರೆಗೂ ಕೊಡಬೇಕು. ಇದಕ್ಕಾಗಿ ಹತ್ತಾರು ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಎಲ್ಲರನ್ನೂ ಗುರುತಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಚುನಾವಣೆ ಮೊದಲು ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಈಗ ಮಾತು ಬದಲಿಸುವುದು ಎಷ್ಟರ ಮಟ್ಟಿಗೆ ಸರಿ?ಪ್ರತಿಭಟನಾಕಾರರು ಕಾಂಗ್ರೆಸ್ಸಿನ ನಾಯಕರನ್ನು ಪ್ರಶ್ನಿಸಿದರು.ಯುವಜನರ ಮೊದಲ ಆದ್ಯತೆ ಉ ದ್ಯೋಗ ಹೊರತು ಭತ್ಯೆಯಲ್ಲ. ಆದರೆ ಅವರಿಗೆ ಉದ್ಯೋಗ ನೀಡುವವರೆಗೆ ಅವರು ಅತ್ಮ ಗೌರವಕ್ಕಾಗಿ ಭತ್ಯೆ ಅಗತ್ಯವಿದೆ ಎಂದರು. ಎಐಡಿವೈಒನ ಜಿಲ್ಲಾ ಸಂಚಾಲಕ ಕೃಷ್ಣ,ಸಂಚಾಲಕ ರವಿಕುಮಾರ್,ಕಿರಣ್,ಕುಮುದಾ,ಅವಿನಾಶ್,ಅರುಣ್,ರಘು ಏಳುಕೋಟಿ,ನಿಂಗ ರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net