ನಿರುದ್ಯೋಗ ನಿವಾರಣೆಗೆ ವೃತ್ತಿ ಶಿಕ್ಷಣ

31-GPT-1
Published on

ಗುಂಡ್ಲುಪೇಟೆ: ಯುವಕರ ನಿರುದ್ಯೋಗ ನಿವಾರಣೆಗೆ ಅಗತ್ಯವಾದ ವೃತ್ತಿ ಶಿಕ್ಷಣ ನೀಡುತ್ತಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ತಾಲೂಕಿನ ತೆರಕಣಾಂಬಿ ಗ್ರಾಮದ ಐಟಿಐ ಕಾಲೇಜಿಗೆ ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನ ತೆರಕಣಾಂಬಿ, ಪಟ್ಟಣ ಹಾಗೂ ಬೇಗೂರು ಗ್ರಾಮಗಳಲ್ಲಿ ಐಟಿಐ ಕಾಲೇಜುಗಳಿದ್ದು, ವಿವಿಧ ವೃತ್ತಿ ತರಬೇತಿ ನೀಡಲಾಗುತ್ತಿದೆ. ಟಾಟಾ ಸಂಸ್ಥೆಯಲ್ಲಿ ಉದ್ಯೋಗಾವಕಾಶ ದೊರಕುವಂತೆ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣ ಮುಗಿದ ಕೂಡಲೇ ಉದ್ಯೋಗ ದೊರಕುವುದರಿಂದ ನಿರುದ್ಯೋಗ ಸಮಸ್ಯೆ ಪರಿಹಾರವಾಗುತ್ತಿದೆ. ದೂರದ ಊರುಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ, ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ನಂತರ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳ ತರಬೇತಿ ಮತ್ತು ಕುಂದುಕೊರತೆ ಬಗ್ಗೆ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ಗೋವಿಂದು, ಪಾಪಣ್ಣಿ, ಶಶಿ, ಮಾಜಿ ಸದಸ್ಯ ಟಿ.ಎಸ್. ಮಹದೇವಸ್ವಾಮಿ, ಪಿಡಿಒ ಮಹದೇವಸ್ವಾಮಿ, ಪ್ರಾಂಶುಪಾಲ ರಮೇಶ್, ಮುಖಂಡರಾದ ಟಿ.ಸಿ.ಬಸಪ್ಪದೇವರು. ಟಿ.ಕೆ.ಗೋಪಾಲ, ಆರ್.ಮಹೇಶ್, ಶಕ್ತಿಕೇಂದ್ರದ ಅಧ್ಯಕ್ಷ ಕೆ.ಎಸ್.ಶಿವಪ್ರಸಾದ್ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net