

ಕಲಬುರಗಿ: ದಲಿತ ಮಕ್ಕಳು ಪದವಿ ಮುಗಿಸಿದ ನಂತರ ದೊರೆಯುವ ಉದ್ಯೋಗವೇನು ಎಂಬುದರ ಮೇಲೆ ರ‍್ಥಿಕ ಸ್ಥಿತಿ ರ‍್ಥವಾಗುತ್ತದೆ. ನೇಮಕಗಳಿಲ್ಲದೆ ರ‍್ಕಾರಿ ಉದ್ಯೋಗ ಕನಸಾಗಿದ್ದು, ಖಾಸಗಿಯಲ್ಲಿನ ಕಳಪೆ ಕೆಲಸಕ್ಕೆ ಹೋಗುವಂತಾಗಿದೆ. ನಮ್ಮ ಮಕ್ಕಳ ನಿರುದ್ಯೋಗ ಸಮಸ್ಯೆ ಚಳವಳಿಯ ಭಾಗ ಆಗಬೇಕು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಿರಣ ಗಾಜನೂರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಗಳವಾರ ರ‍್ನಾಟಕ ದಲಿತ ಸರ‍್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಟಕದಿಂದ ಮಂಗಳವಾರ ಹಮ್ಮಿಕೊಂಡ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸರ‍್ಷ ದಿನಾಚರಣೆಯಲ್ಲಿ ಮಾತನಾಡಿ, ಚಳವಳಿಯನ್ನು ಸಮಕಾಲಿನ ಕಾಲಟ್ಟದಲ್ಲಿ ಆಗುತ್ತಿರುವ ರ‍್ಥಿಕ ಬದಲಾವಣೆಗಳ ಜತೆ ಜೋಡಿಸಬೇಕು. ರ‍್ತಮಾನದ ಸವಾಲುಗಳು ೨೧ನೇ ಶತಮಾನದ ಚಳವಳಿಯ ಭಾಗ ಆಗಬೇಕು ಎಂದು ಹೇಳಿದರು.
ಅಸ್ಮ$ಷ್ಯತೆ ಆಚರಣೆ ಅಷ್ಟೇ ಅಲ್ಲ ದಲಿತ ಸಮುದಾಯಗಳ ಜನರನ್ನು ಶಿಣ, ಕೃಷಿ, ನೀರು, ಮುಖ್ಯ ರಸ್ತೆಗಳಲ್ಲಿ ಸಂಚಾರ, ವ್ಯಾಪಾರ ಸೇರಿ ಎಲ್ಲ ಸಂಪನ್ಮೂಲಗಳ ಪ್ರವೇಶ, ಬಳಕೆಗೆ ತಡೆ ಆಗಿತ್ತು. ಅದನ್ನು ಪ್ರತಿ ಹಂತದಲ್ಲೂ ತಡೆಯಲು ಶ್ರಮಿಸಬೇಕಿದೆ ಎಂದರು.
ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ಅಂಬೇಡ್ಕರ್ರು ಸವಾಲುಗಳ ಮಧ್ಯೆ ಶಿಣ ಪಡೆದು, ಸಮಾನತೆ ನೀಡುವ ಸಂವಿಧಾನ ಬರೆದರು. ಸಂವಿಧಾನದಲ್ಲಿನ ಮೀಸಲಾತಿಯಿಂದಲೇ ನನ್ನಂತ ವ್ಯಕ್ತಿ ಮೇಯರ್ ಆಗಲು ಸಾಧ್ಯವಾಗಿದೆ. ಯುವಕರು ಶಿಣ ಪಡೆದು, ಸಾಮಾಜಿಕ ಏಳೆಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಚಿಂತಕ ಆರ್.ಕೆ.ಹುಡಗಿ ಮಾತನಾಡಿ, ಜಾತಿ, ಅಸ್ಮ$ಷ್ಯತೆಯ ರೋಗ ಕ್ಯಾನ್ಸರ್, ಏಡ್ಸ್ಗಿಂತಲೂ ಅಪಾಯಕಾರಿ. ಏಡ್ಸ್ ಬಂದವರಿಗೆ ಮಾತ್ರ ಬಾಧಿಸುತ್ತದೆ. ಆದರೆ ಜಾತಿಯ ರೋಗ ಮೇಲ್ಜಾತಿಯವರಿಗೆ ಅಂಟಿದರೆ ಕೆಳಜಾತಿಯವರು ಸಂಕಷ್ಟ ಎದುರಿಸುತ್ತಾರೆ. ಆದ್ದರಿಂದ ಚರಿತ್ರೆಯನ್ನು ಸರಿಯಾಗಿ ರ‍್ಥೈಸಿಕೊಂಡು ರ‍್ಥಪರ‍್ಣ ಜೀವನ ನಡೆಸಬೇಕು. ರ‍್ತಮಾನ ಕಟ್ಟಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯ ರ‍್ಜುನ ಗೊಬ್ಬುರಕರ್ ಅಧ್ಯತೆ ವಹಿಸಿದ್ದರು. ಪ್ರಮುಖರಾದ ನಾಗಣ್ಣ ಬಡಿಗೇರ, ಸಂಜೀವಕುಮಾರ ಜವಳಕರ್, ಗೋಪಾಲ ರಾಂಪುರೆ, ಮಾರುತಿ ಹುಳಗಳಕರ್ ಇತರರಿದ್ದರು.