ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ

13BK6
Published on

ಬಸವಕಲ್ಯಾಣ: ಕಾರ್ಮಿಕರ ಕಾರ್ಡ್ ಅನುಮೋದನೆಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರ್ಮಿಕ ನಿರೀಕ್ಷಕರನ್ನು ವರ್ಗಾವಣೆ ಮಾಡÀಬೇಕು ಎಂದು ಕಾಂಗ್ರೆಸ್ ಪಕ್ಷದ ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್‌ಸ್ಟçಕ್ಷನ್ ವೇಲ್ಫೆರ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಅಶೋಕ ಢಗಳೆ ಒತ್ತಾಯಿಸಿದ್ದಾರೆ.
ಸುಮಾರು ೪೦ ಸಾವಿರ ಕಾರ್ಮಿಕ ಕಾರ್ಡ್ ನೋಂದಣಿಯಾಗಿವೆ. ಇದರಲ್ಲಿ ೧೦ ಸಾವಿರ ಜನ ಕಾರ್ಮಿಕರಿಲ್ಲ. ನಿಜವಾಗಿ ಕಾರ್ಮಿಕರಾಗಿರುವ ಹಲವರ ಕಾರ್ಡ್ಗಳನ್ನು ಕಾರ್ಮಿಕ ನಿರೀಕ್ಷಕರು ಅನುಮೋದಿಸುತ್ತಿಲ್ಲ. ಈ ಕುರಿತು ಪರಿಶೀಲಿಸಿ ಏಳು ದಿನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಆಯುಕ್ತ ಪ್ರಕಾಶ ಕುದರಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಅಶೋಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net