

ಚಿತ್ರದುರ್ಗ: ನಿರಾಶ್ರೀತರ ಪರಿಹಾರ ಕೇಂದ್ರದಲ್ಲಿ ಇರುವಂಥವರು ಮನೆಗಳಿಗೆ ತೆರಳಲು ಬಯಸಿದರೆ,ಅವರಿಗೆ ಅಗತ್ಯನೆರವು ನೀಡಲು ಪ್ರಾಧಿಕಾರ ಸಿದ್ಧ ವಿ ದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಎಂ.ವಿಜಯ್ ಹೇಳಿದರು. ಪ್ರಾಧಿಕಾರ,ವಕೀಲರ ಸಂಘ ಹಾಗೂ ಸಮಾ ಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಚಿತ್ರದುರ್ಗ ತಾಲೂಕು ಗೋನೂರು ನಿರಾಶ್ರೀತರ ಪರಿಹಾರ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಹಾಗೂ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,ಮನ ಪರಿವರ್ತನೆಯಾಗಿ ತಾವು ಮನೆ ಗಳಿಗೆ ಹಿಂತಿರುಗಲು ಒಪ್ಪಿದರೆ ಪ್ರಾಧಿಕಾರ ಸೂಕ್ತ ನೆರವು ಒದಗಿಸಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ,ಮಾನಸಿಕ ಅಸ್ವಸ್ಥರಾಗಿರುವಂಥವರಿಗೆ ಚಿಕಿತ್ಸೆ ಕೊಡಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶ ಇಲಾಖೆಯದ್ದಾಗಿದೆ ಎಂದರು.ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿದರು. ಪರಿಹಾರ ಕೇಂದ್ರದ ವ್ಯವಸ್ಥಾಪಕ ಮಹದೇವಯ್ಯ,ಅಧೀಕ್ಷಕ ಬಿ.ವಿಜಯ್‌ಕುಮಾರ್ ಇತರರು ಇದ್ದರು.