ನಿರಾಶ್ರಿತರಿಗೆ ಆಶ್ರಯ ಯೋಜನೆಯಡಿ ಮನೆ : ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್​ ಭರವಸೆ

01
Published on

ಕೊರಟಗೆರೆ

ಸಣ್ಣ ನೀರಾವರಿ ಇಲಾಖೆಯು ಕೊರಟಗೆರೆ&ಮಲ್ಲೇಶ್ವರ ರಸ್ತೆಯಲ್ಲಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ರಿಡ್ಜ್​ ಕಂ ಬ್ಯಾರೇಜ್​ ಕಾಮಗಾರಿಯಿಂದ ನಿರಾಶ್ರಿತರಾದವರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಮಾಜಿ ಡಿಸಿಎಂ, ಶಾಸಕ ಡಾ. ಜಿ.ಪರಮೇಶ್ವರ್​ ಭರವಸೆ ನೀಡಿದರು.

2.5 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಬ್ರಿಡ್ಜ್​ ಕಂ ಬ್ಯಾರೇಜ್​ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡುವಂತೆ ತಹಸೀಲ್ದಾರ್​ ನಹೀದಾ ಜುಮ್​ ಜುಮ್​ ಅವರಿಗೆ ಸೂಚಿಸಿದ್ದೇನೆ. ಆದ್ದರಿಂದ, ಯಾರೊಬ್ಬರೂ ಧೈರ್ಯಗೆಡಬೇಕಾಗಿಲ್ಲ ಎಂದರು.

ಇದೀಗ ಕೈಗೊಳ್ಳಲಾಗಿರುವ ಕಾಮಗಾರಿ ನೂರಾರು ವರ್ಷ ಸುಸ್ಥಿತಿಯಲ್ಲಿ ಇರಬೇಕು. ಆದ್ದರಿಂದ, ನಿಯಮಿತವಾಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದರು.

ತಾಲೂಕು ಬ್ಲಾಕ್​ ಕಾಂಗ್ರೆಸ್​ ಅಧ್ಯ ಅರಕೆರೆ ಶಂಕರ್​, ಗ್ರಾಪಂ ಸದಸ್ಯ ಮಂಜುನಾಥ್​, ಇಂಜಿನಿಯರ್​ ರಮೇಶ್​, ಮುಖಂಡರಾದ ರಾವೇಂದ್ರ, ಅರವಿಂದ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net