ನಿರಾಶ್ರಿತ ಯುವಕನಿಗೆ ತಾತ್ಕಾಲಿಕ ಶೆಡ್ ನಿರ್ಮಾಣ

16blrp1
Published on

ಬೇಲೂರು: ಕೆಲ ವರ್ಷಗಳ ಹಿಂದೆ ಗಾಳಿ, ಮಳೆಗೆ ಮನೆ ಕಳೆದುಕೊಂಡಿದ್ದ ಅರೇಹಳ್ಳಿಯ ಇಂದಿರಾ ನಗರದ ಯುವಕನಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡುವ ಮೂಲಕ ಸ್ನೇಹಿತರು ನೆರವಾಗಿದ್ದಾರೆ.

ಉದ್ಯಮಿ ಸೈಯ್ಯದ್ ವೇಝ್‌ರ ಸಹಕಾರದಿಂದ ಅರೇಹಳ್ಳಿಯ ಸ್ನೇಹಿತರು ಸೇರಿ ಇಂದಿರಾ ನಗರದ ಯುವಕ ಸಂಗ ಎಂಬಾತನಿಗೆ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದ ಸಂದರ್ಭ ಗಾಳಿ ಮಳೆಗೆ ಹಳೆಯದಾದ ಮನೆ ಶಿಥಿಲವಾಗಿತ್ತು. ವಾಪಸ್ ಬಂದ ಯುವಕ ಶಿಥಿಲವಾಗಿದ್ದ ಮನೆಯಲ್ಲೇ ವಾಸವಿದ್ದ. ಈ ಹಿನ್ನೆಲೆಯಲ್ಲಿ ಅರೇಹಳ್ಳಿಯ ಕೆಲ ಸ್ನೇಹಿತರು ಯುವಕನಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸಮಾಜ ಸೇವಕ ಉದ್ಯಮಿ ಸೈಯ್ಯದ್ ವೇಝ್‌ಗೆ ಮಾಹಿತಿ ನೀಡಿದರು. ಅವರಿಂದ ಆರ್ಥಿಕ ಸಹಕಾರ ಪಡೆದು ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ದಾರೆ.

ಯುವಕ ಸಂಗ ಮಾತನಾಡಿ, ಉದ್ಯಮಿ ಸೈಯ್ಯದ್ ವೇಝ್, ಗ್ರಾಮದ ಮಹೇಂದ್ರ ಮತ್ತು ಸ್ನೇಹಿತರು ಸಹಾಯ ಮಾಡಿದ್ದು ಸಹಕಾರ ನೀಡಿದ ಎಲ್ಲ ಸ್ನೇಹಿತರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಅರೇಹಳ್ಳಿ ಯೂತ್ ಕಾಂಗ್ರೆಸ್ ನಗರಾಧ್ಯಕ್ಷ ಮಹೇಂದ್ರ, ಅರೇಹಳ್ಳಿಯ ಚಂದ್ರು, ರುದ್ರೇಶ್, ಶಶಿ, ಹಾಲಪ್ಪ, ಮಲ್ಲೇಶ್, ನಿತಿನ್, ಸುನೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net