ನಿರಾಣಿ ಗ್ರುಪ್ ನಿಂದ ೫ ಸಾವಿರ ಕೋಟಿ ರೂ. ಹೂಡಿಕೆಗೆ ಅರ್ಜಿ

1044cf7e-9ee0-4d83-b058-b1b5016e1d18
Published on

ಬಾಗಲಕೋಟೆ: ರಾಜ್ಯ ಸರ್ಕಾರ ಪ್ರಸಕ್ತ ಇನ್ವೆಸ್ಟ್ ಕರ್ನಾಟಕ ಮೇಳದಲ್ಲಿ ನಿರಾಣಿ ಗ್ರುಪ್ ನಿಂದ ೫ ಸಾವಿರ ಕೋಟಿ ರೂ. ಬಂಡವಾಳ ಹೂಡಲು ಈಗಾಗಲೇ ಅರ್ಜಿ ಸಲ್ಲಿಸಿದ್ದಾಗಿ ನಿರಾಣಿ ಗ್ರುಪ್‌ನ ಮುಖ್ಯಸ್ಥ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, -É. ೧೨, ೧೩ ಹಾಗೂ ೧೪ ರಂದು ಇನ್ವೆಸ್ಟ್ ಕರ್ನಾಟಕ ನಡೆಯಲಿದ್ದು, ಇಲ್ಲಿ ದೇಶ, ವಿದೇಶಗಳ ಯಾವೆಲ್ಲ ಕಂಪನಿಗಳು ಬರುತ್ತವೆ ನೋಡಿಕೊಂಡು ನಮ್ಮ ಜಿಲ್ಲೆಯಲ್ಲಿ ಎಷ್ಟು ಕೈಗಾರಿಕೆ ಬರುತ್ತವೆ ನೋಡೋಣ ಎಂದರು.

ಈ ಹಿಂದೆ ತಾವು ಕೈಗಾರಿಕಾ ಸಚಿವರಾಗಿದ್ದಾಗ ನಡೆಸಿದ್ದ ಮುರು ಗ್ಲೊಬಲ್ ಇನ್ವೆಸ್ಟ್ ಮೆಂಟ್ ಮೇಳಗಳು ಇಡೀ ಜಗತ್ತು ಕರ್ನಾಟಕದ ಕಡೆಗೆ ನೋಡುವಂತೆ ಮಾಡಿತ್ತು. ಬಳಿಕ ಬೇರೆ ಬೇರೆ ರಾಜ್ಯಗಳು ತಮ್ಮ ರಾಜ್ಯಗಳ ಹೆಸರಿನಲ್ಲಿ ಮಾಡಿದವು. ಬಿಹಾರ ಇನ್ವೆಸ್ಟ್ ನಲ್ಲಿ ಅಲ್ಲಿ ನಿರಾಣಿ ಗ್ರುಪ್ ಸಕ್ಕರೆ ಕಾರ್ಖಾನೆ ಆರಂಭಿಸಿದೆ. ಈಗ ಬಾಗಲಕೋಟೆ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಮುಂದಾಗಿದ್ದೇವೆ. ಅಂದರೆ ರೈತರು ಬೆಳೆಯುವ ಬೆಳಗಳ ಉತ್ಪಾದನೆಗಳಿಗೆ ಹೊಸದಾಗಿ ಯೋಜನೆ ಆರಂಭಿಸುತ್ತೇವೆ. ಉದಾಹರಣೆಗೆ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಲ್ಲ. ಈಗ ನಾವು ಆರಂಭಿಸುವುದು ಬಯೋ ಪ್ಲಾಸ್ಟಿಕ್ ತಯಾರಿಕೆ. ಕಬ್ಬಿನ ಹಾಲು, ಅಕ್ಕಿ, ಮೆಕ್ಕೆಜೋಳ ಬಳಕೆ ಮಾಡಿಕೊಂಡು ಬಯೋ ಪ್ಲಾಸ್ಟಿಕ್ ತಯಾರಿಸುವುದಾಗಿದೆ. ಇದು ಮಣ್ಣಿನಲ್ಲಿ ಕರಗುತ್ತದೆ. ಹೀಗೆ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಆರಂಭಿಸಲು ೫ ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದೇವೆ ಎಂದರು.

ಈಗಾಗಲೇ ನಿರಾಣಿ ಗ್ರುಪ್‌ನಿಂದ ೭೪ ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಇದು ಒಂದು ಲಕ್ಷಕ್ಕೆ ಆಗಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದೇವೆ. ಸದ್ಯ ನಿರಾಣಿ ಗ್ರುಪ್ ದೇಶದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ಮತ್ತು ಜಗತ್ತಿನಲ್ಲೆ ಅತ್ಯದಿಕ ಇಥಿನಾಲ್ ಉತ್ಪಾದಿಸುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net