

ಚಿತ್ರದುರ್ಗ: ಸ್ವಚ್ಛತೆ ಅಭಿಯಾನ ಒಂದು ದಿನಕ್ಕೆ ಸಿಮೀತಗೊಳಿಸದೆ, ಸ್ವಚ್ಛತೆ ಕಾಪಾಡಿಕೊಳ್ಳುವ ಕೆಲಸ ನಿರಂತರವಾಗಿರಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ. ದ್ಯಾಮಣ್ಣ ಹೇಳಿದರು.
ಸಹಕಾರ ಇಲಾಖೆ, ರಾಜ್ಯಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಆ ರೋಗ್ಯವೇ ಭಾಗ್ಯ ಯುವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ನಗರದ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಸಹಕಾರದಿಂದ ಸ್ವಚ್ಛತೆ ಅಭಿಯಾನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಮನೆ, ಕಚೇರಿ ಸುತ್ತ ಮುತ್ತಲಿನ ಆವರಣಗಳು ಸ್ವಚ್ಛವಾಗಿ ಇರುವಂತೆ ನಿತ್ಯವೂ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿ.ಬಿ. ಶೇಖರಪ್ಪ, ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್. ದಿಲೀಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಕಲ್ಲೇಶ್ ಡಿ. ಮೌರ್ಯ ಉಪನ್ಯಾಸ ನೀಡಿದರು. ಸಹಕಾರ ಸಂಘದ ಸಹಾಯಕ ನಿಬಂಧಕ ಬಾಹುಬಲಿ ಹಂಜೆ, ಯುವಕರ ಸಂಘದ ಅಧ್ಯಕ್ಷ ಪರಶುರಾಮ್, ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಶ್ರೀ ಪಿ. ಹುನಗುಂದ, ಶಿಕ್ಷಕ ನಾಗರಾಜ ಪಾಟೀಲ್ ಇತರರು ಇದ್ದರು. ಕಾರ್ಯಕ್ರಮದ ನಂತರ ಸಹಕಾರ ಭವನ ಆವರಣದ ಸುತ್ತ ಮುತ್ತ ಸ್ವಚ್ಛತೆ ಕಾರ್ಯ ನಡೆಯಿತು.