ನಿರಂತರ ಹುಡುಕಾಟದಲ್ಲಿ ತೊಡಗಿಸಿ: ಪ್ರೊ.ಆರ್.ಇಂದಿರಾ ಕರೆ

18
ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಕ್ತಭಂಡಾರ ಅಧ್ಯಯನ ಪುಸ್ತಕವನ್ನು ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಬಿಡುಗಡೆಗೊಳಿಸಿದರು. ಪ್ರೊ.ಆರ್.ಇಂದಿರಾ, ಡಾ.ಎ.ಖಾದರ್ ಪಾಷ, ಪ್ರೊ.ಕಾಂಬ್ಳೆ ಅಶೋಕ್, ಪ್ರೊ.ರಾಮನಾಥಂ ನಾಯ್ಡು ಇನ್ನಿತರರು ಇದ್ದರು.
Published on

ಮೈಸೂರು: ಸಮಕಾಲೀನ ಸಂದರ್ಭಗಳಲ್ಲಿ ಶೈಕ್ಷಣಿಕ ಪ್ರಪಂಚದ ನಿರೀಕ್ಷೆಗಳು ಹೆಚ್ಚು ವಿಸ್ತಾರವಾಗುತ್ತಿವೆ. ಅಧ್ಯಾಪಕರು ನಿರಂತರವಾದ ಹುಡುಕಾಟದಲ್ಲಿ ತೊಡಗಬೇಕು ಎಂದು ನಿವೃತ್ತ ಪ್ರಾಧ್ಯಾಪಕಿ, ಚಿಂತಕಿ ಪ್ರೊ.ಆರ್.ಇಂದಿರಾ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೋಧನೆ-ಸಂಶೋಧನೆಯು ಬಹುಶಿಸ್ತೀಯ ದೃಷ್ಟಿಕೋನದಿಂದ ಅರ್ಥೈಸುವ ಶಕ್ತಿಯನ್ನು ಅಧ್ಯಾಪಕರು ಬೆಳೆಸಿಕೊಳ್ಳಬೇಕು. ಇಂದು ಜ್ಞಾನದ ಮೂಲಗಳು ಹೆಚ್ಚಿವೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವೂ ಹೆಚ್ಚಿವೆ. ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ತಾವು ತರಗತಿಗಳಲ್ಲಿ ಪಡೆದ ಜ್ಞಾನವನ್ನು ಬದುಕಿನ ವಾಸ್ತವಗಳಿಗೆ ಅನ್ವಯಿಸುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದರು.

ಜ್ಞಾನಾರ್ಜನೆಯನ್ನು ತರಗತಿಗಳಿಗೆ ಮಾತ್ರ ಸೀಮಿತಗೊಳಿಸದೆ ಹೊರ ಪ್ರಪಂಚದ ಅರಿವು ಹಾಗೂ ಅನುಭವವನ್ನು ಅಧ್ಯಾಪಕರು ವಿದ್ಯಾರ್ಥಿಗಳಿಗೆ ನೀಡುವಂತಾಗಬೇಕು ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಮುಕ್ತಭಂಡಾರ ಅಧ್ಯಯನ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಪ್ರಭಾರ ಆಡಳಿತಾತ್ಮಕ ಕುಲಸಚಿವ ಡಾ.ಎ.ಖಾದರ್ ಪಾಷ ಮಾತನಾಡಿದರು. ಶೈಕ್ಷಣಿಕ ಡೀನ್ ಪ್ರೊ.ಕಾಂಬ್ಳೆ ಅಶೋಕ್, ಅಧ್ಯಯನ ಡೀನ್ ಪ್ರೊ.ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net