

ಗಜೇಂದ್ರಗಡ: ಗಜೇಂದ್ರಗಡ ತಾಲೂಕು ಕೃಷಿ ಪಂಪಸೆಟ್ ಬಳಕೆದಾರರ ಸಂಘದಿಂದ ಉಣಚಗೇರಿ ಗ್ರಾಮದ ರೈತರಿಗೆ ನಿರಂತರ 24 ತಾಸು ವಿದ್ಯುತ್ ಪೂರೈಸಲು ಹಾಗೂ ಗಜೇಂದ್ರಗಡ ತಾಲೂಕು ಗ್ರಾಮೀಣ ಭಾಗದ ರೈತರ ವಿದ್ಯುತ್ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಉಣಚಗೇರಿ ಸರಹದ್ದಿನ ರೈತರು ಹ್ಮಮಿೊಂಡಿರá-ವ ಅಹೋರಾತ್ರಿ ಪ್ರತಿಭಟನೆ ಶನಿವಾರ 13 ದಿನ ಪೂರೈಸಿದ್ದು, ಸೆ. 5ರಂದು ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ಜರುಗಲಿದೆ.
ಹೋರಾಟ ಸಮಿತಿ ಅಧ್ಯಕ್ಷ ಮುತ್ತಣ್ಣ ಮ್ಯಾಗೇರಿ ಮಾತನಾಡಿ, 13 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳೂ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಪರಿಹಾರ ದೊರಕುತ್ತಿಲ್ಲ. ಹೀಗಾಗಿ ಸೆ. 5ರಂದು 400ಕ್ಕೂ ಅಧಿಕ ಟ್ರ್ಯಾಕ್ಟರ್ಗಳೊಂದಿಗೆ ಬೃಹತ್ ಹೋರಾಟಕ್ಕೆ ಕರೆ ನೀಡಿದ್ದೇವೆ ಎಂದರು.
ಬಸವರಾಜ ಪಲ್ಲೇದ, ಶಿವಪ್ಪ ಕುಂಬಾರ, ಮುತ್ತಣ್ಣ ಕೋರಧಾನಮಠ, ಯಲ್ಲಪ್ಪ ಕಂಠಿ, ಕೆ.ಆರ್. ಕಟ್ಟಿಮನಿ, ಇಸ್ಮಾಯಿಲ್ ಗೋಲಗೇರಿ, ಈರಪ್ಪ ಸುಳ್ಳದ, ಸಿದ್ದು ಗೊಂಗಡಶೆಟ್ಟಿಮಠ ಇದ್ದರು.