ನಿರಂತರ ವಿದ್ಯುತ್ ಒದಗಿಸಲು ಆಗ್ರಹ

02
Published on

ಕೆಂಭಾವಿ : ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಸೋಮವಾರ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮೊದಲು ೭ ತಾಸು ನಿರಂತರ ವಿದ್ಯುತ್ ಮೊಟಕುಗೊಳಿಸಿ ಈಗ ೫ ಗಂಟೆ ವಿದ್ಯುತ್ ಒದಗಿಸಲು ಸರ್ಕಾರ ಮುಂದಾಗಿದೆ. ಇದರಿಂದ ರೈತರಿಗೆ ಭಾರಿ ಆಘಾತವಾಗಿದ್ದು, ನೀರಿನ ಕೊರತೆಯಿಂದ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಭಾನುವಾರದಿಂದ ಮಧ್ಯರಾತ್ರಿ ವಿದ್ಯುತ್ ನೀಡುತ್ತಿದ್ದರಿಂದ ಹೊಲಗದ್ದೆಗಳಿಗೆ ನೀರು ಬಿಡುವುದು ತೀವ್ರ ಸಮಸ್ಯೆಯಾಗಿದ್ದು, ಕೂಡಲೇ ನಿರಂತರ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.

ಭೀಮನಗೌಡ ಕಾಚಾಪುರ, ತೋಟಪ್ಪ ಪೂಜಾರಿ, ನಯುಮ ಖಾಜಿ, ಶಫೀಕ್ ದಫೇದಾರ್, ಶ್ರೀಕಾಂತ ಅಂಗಡಿ, ಬಂಡೋಳಿ ಸಾಹು, ರಮೇಶ ತುಂಬಗಿ, ಕೆಂಚಪ್ಪ, ಅಂಬಲಯ್ಯ ಘಂಟಿ, ನಿಂಗಪ್ಪ ಪೂಜಾರಿ, ಯಲ್ಲಪ್ಪ ಕವಾಲ್ದಾರ, ಸಂತೋಷ ಹೊಸಮನಿ, ಶ್ರೀಶೈಲ ಮಲಕಾಪುರ, ಮಂಜುನಾಥ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net