ನಿರಂತರ ಮಳೆಗೆ ಹಾಸನ ಜನಜೀವನ ಅಸ್ತವ್ಯಸ್ತ

25_HSN_05
filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:null; brp_del_sen:null; motionR: null; delta:null; module: video;hw-remosaic: false;touch: (0.44759294, 0.4796875);sceneMode: null;cct_value: 0;AI_Scene: (-1, -1);aec_lux: 189.0;aec_lux_index: 0;albedo: ;confidence: ;motionLevel: -1;weatherinfo: null;temperature: 33;
Published on

ಹಾಸನ: ನಗರದಲ್ಲಿ ಮುಂಜಾನೆಯಿಂದ ಬಿಡುವಿಲ್ಲದೇ ಸುರಿದ ಬಾರಿ ಗಾಳಿ ಮಳೆಗೆ ಬುಧವಾರ ಜನಜೀವನ ಅಸ್ತವ್ಯಸ್ತವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೆಲಸ ಮಾಡುವವರು ಹಾಗೂ ವ್ಯಾಪಾರಸ್ಥರು ಸಮಸ್ಯೆ ಎದುರಿಸಿ ಮಳೆಯಲ್ಲಿಯೇ ಸಾಗಬೇಕಾಯಿತು.

ಕಳೆದ ಒಂದು ವಾರದಿಂದಲೂ ನಗರದಲ್ಲಿ ಮಳೆ ಸುರಿಯುತ್ತಿದ್ದು, ದಿನವಿಡೀ ಮೋಡ ಕವಿದ ವಾತಾವರಣವಾಗಿದೆ. ಬುಧವಾರದ ಮಳೆಯಿಂದ ರಸ್ತೆ ಬದಿ ವ್ಯಾಪಾರಸ್ಥರು ಮಳೆಯನ್ನು ಲೆಕ್ಕಿಸದೇ ಕೊಡೆ ಹಾಗೂ ಇತರೆ ರಕ್ಷಣೆಯೊಂದಿಗೆ ವ್ಯಾಪಾರವನ್ನು ಮುಂದುವರೆಸಿದರು. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ಮಳೆ ನೀರು ಕೆರೆಯಾಗಿ ನಿಂತಿವೆ. ಈ ವೇಳೆ ನೀರಿನ ಮೇಲೆ ವಾಹನಗಳು ಸಂಚರಿಸಿದಾಗ ಕಾರಂಜಿಯಂತೆ ನೀರು ಸುತ್ತ ಚಿಮ್ಮುತಿದೆ. ಇನ್ನು ವಾಹನದ ರಭಸಕ್ಕೆ ಪಾದಚಾರಿಗಳು ನಡೆದುಕೊಂಡು ಹೋಗುವಾಗ ಅವರ ಮೇಲೆ ರಸ್ತೆ ನೀರು ಮೈ ಮೇಲೆ ಹಾರುತ್ತಿರುವುದು ಸಾಮಾನ್ಯವಾಗಿತ್ತು. ಹಾಸನ ನಗರದಲ್ಲಿ ರಾತ್ರಿಯಿಂದಲೂ ಸುರಿಯುತ್ತಿರುವ ಜಡಿ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ವಾಹನ ಇಲ್ಲದವರು ಬೆಳಿಗ್ಗೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಕೊಡೆಯ ಆಶ್ರಯದಲ್ಲಿ ಹೋಗಿ ಬರಬೇಕಾಯಿತು.

ಮಳೆಯು ಬೆಳಗಿನಿಂದ ರಾತ್ರಿವರೆಗೂ ಸುರಿದರೂ ಕೆಲ ಸಮಯ ಮಾತ್ರ ವಿರಾಮ ನೀಡಿ ಸತತವಾಗಿ ಬರುತಿತ್ತು. ಅದರಲ್ಲೂ ಆಲೂರು, ಸಕಲೇಶಪುರ ಭಾಗದಲ್ಲಿ ಅಪಾರ ಗಾಳಿ ಮಳೆ ಅಬ್ಬರಕ್ಕೆ ಅಪಾರ ನಷ್ಟಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಮಳೆಯ ಸೂಚನೆ ಇರುವ ಆಲೂರು, ಸಕಲೇಶಪುರ ಹಾಗೂ ಅರಕಲಗೂಡು ತಾಲೂಕಿಗೆ ಅಂಗನವಾಡಿ ಹಾಗೂ ಶಾಲೆಗಳಿಗೆ ಬುಧವಾರ ರಜೆ ಕೊಡಲಾಗಿತ್ತು. ಇನ್ನು ಹಲವು ದಿನಗಳ ಕಾಲ ಈ ಮಳೆ ಬರುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿರುವುದರಿಂದ ಗುರುವಾರವೂ ಕೂಡ ಈ ಮೂರು ತಾಲೂಕುಗಳಲ್ಲಿ ರಜೆಯನ್ನು ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net