ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ

ydg06
Published on

ಕೊಡೇಕಲ್: ವಾಯುಭಾರ ಕುಸಿತದಿಂದ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸಗೊಂಡಿದ್ದು, ವ್ಯಾಪಾರ ವಹಿವಾಟು ಮಂಕಾಗುವAತೆ ಮಾಡಿದೆ.

ವಲಯದಲ್ಲಿ ಜಿಟಿಜಿಟಿ ಮಳೆಯಿಂದ ಬಹುತೇಕ ಗ್ರಾಮಗಳ ರಸ್ತೆ ಕೆಸರು ಗದ್ದೆಯಂತಾಗಿ, ಸಂಚಾರಕ್ಕೆ ಬಾರದಂತಾಗಿವೆ. ಇನ್ನೂ ಹಲವು ಗ್ರಾಮಗಳಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊAಡಿದ್ದರಿAದ ಇದನ್ನು ತೆರವುಗೊಳಿಸದ ಕಾರಣ ಮಳೆ ಮತ್ತು ಚರಂಡಿ ನೀರು ಒಟ್ಟಿಗೆ ರಸ್ತೆ ಮೇಲೆ ಹರಿಯಲಾರಂಭಿಸಿದೆ. ಇದರಿಂದ ಜನರು ರೋಗದ ಭೀತಿ ಎದುರಿಸುವಂತಾಗಿದೆ. ಇನ್ನು ತಗ್ಗು ಪ್ರದೇಶದ ಭೂಮಿಯಲ್ಲಿ ನೀರು ನಿಂತ ಕಾರಣ ಬೆಳೆಗಳು ಒಣಗಲಾರಂಭಿಸಿದ್ದು, ಇನ್ನೂ ಕೆಲ ಬೆಳೆಗಳಿಗೆ ಕೀಟಭಾದೆ ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ.


ಗ್ರಾಮದ ಚರಂಡಿಯಲ್ಲಿ ತುಂಬಿದ್ದ ತ್ಯಾಜ್ಯವನ್ನು ತೆಗೆದು ರಸ್ತೆ ಬದಿ ಹಾಕಲಾಗಿದೆ. ಆದರೆ ಅದನ್ನು ತೆರವುಗೊಳಿಸದ ಕಾರಣ ಮಳೆಯಿಂದ ರಸ್ತೆ ತುಂಬೆಲ್ಲ ಹರಡಿ ಸಂಚಾರಕ್ಕೆ ತೀವ್ರ ಸಮಸ್ಯೆ ತಂದೊಡ್ಡಿದೆ. ಗ್ರಾಪಂ ಅಧಿಕಾರಿ ಕೂಡಲೇ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net